ತ್ರಾಟಕ ಚಿತ್ರದ ದೃಶ್ಯ
ತ್ರಾಟಕ ಚಿತ್ರದ ದೃಶ್ಯ

ಅತೀಂದ್ರಿಯ ಶಕ್ತಿ, ಯೋಗ ಜತೆಗೊಂದು ಕೊಲೆಯ ರಹಸ್ಯ: ಇದುವೇ ತ್ರಾಟಕ!

ಈ ವಾರ ತೆರೆ ಕಾಣುತ್ತಿರುವ ಬಹುನಿರೀಕ್ಷಿತ ಚಿತ್ರ "ತ್ರಾಟಕ" ನಿರ್ದೇಶಕ ಶಿವ ಗಣೇಶ್ ಚಿತ್ರದ ವಿಇವಿಧ ವಿಭಾಗಗಳ ಕುರಿತಂತೆ ಮಾತನಾಡಿದ್ದಾ
Published on
ಬೆಂಗಳೂರು: ಈ ವಾರ ತೆರೆ ಕಾಣುತ್ತಿರುವ ಬಹುನಿರೀಕ್ಷಿತ ಚಿತ್ರ "ತ್ರಾಟಕ" ನಿರ್ದೇಶಕ ಶಿವ ಗಣೇಶ್ ಚಿತ್ರದ ವಿಇವಿಧ ವಿಭಾಗಗಳ ಕುರಿತಂತೆ ಮಾತನಾಡಿದ್ದಾರೆ. ಮೊದಲಿಗೆ "ತ್ರಾಟಕ" ಶೀರ್ಷಿಕೆ ಸಂಬಂಧ ವಿವರಿಸಿರುವ ನಿರ್ದೇಶಕರು ಇದು ಯೋಗದ ಒಂದು ರೂಪ. ಇದಕ್ಕೆ ಕ್ವಾಂಟಮ್ ಕಾನ್ಸಂಟ್ರೇಷನ್ ಎಂದೂ ಕರೆಯಲಾಗುವುದು ಎಂದರು.
"ಕಥೆ ಉತ್ತಮವಾಗಿದೆ.ಇದೊಂದು ಕೊಲೆ ರಹಸ್ಯವಾಗಿದ್ದು ನಾಯಕನ ಪಾತ್ರ ಪೊಲೀಸ್ ಅಧಿಕಾರಿಯ ವೈಯಕ್ತಿಕ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ.ಒಂದು ಪ್ರಕರಣ ಬೇಧಿಸಲು ಹೊರಟಾಗ ಅವರು ಹೇಗೆ ಹೋರಾಟ ನಡೆಸುತ್ತಾರೆ?ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದರೊಡನೆ ಅವರು ಅಪರೂಪದ ಖಾಯಿಲೆಯಾದ ಕಾಂಪ್ಲೆಕ್ಸ್ ಪಾರ್ಷಿಯಲ್ ಸೀಜರ್ ಎನ್ನುವ ರೋಗದಿಂಡ ಬಳಲುತ್ತಿರುತ್ತಾನೆ.
ಈ ರೋಗದಿಂದ ಮುಕ್ತನಾಗಲು ಪೋಲೀಸ್ ಅಧಿಕಾರಿಯು ತ್ರಾಟಕ ಯೋಗವನ್ನು ಅಭ್ಯಾಸ ಮಾಡುತ್ತಿರುತ್ತಾರೆ.ಎಂದು ನಿರ್ದೇಶಕ ವಿವರಿಸಿದರು.
ಮನಃಶಾಸ್ತ್ರದ ಕುರಿತಂತೆ ಶಿವ ಗಣೇಶ್ ಓದಿದ್ದ ಲೇಖನವು "ತ್ರಾಟಕ" ಚಿತ್ರದ ಹುತ್ತಿಗೆ ಮೂಲ ಕಾರಣವಾಗಿದೆ."ಅತೀಂದ್ರಿಯ ವ್ಯಕ್ತಿಯನ್ನು ಕಂಡುಹಿಡಿಯುವಲ್ಲಿ ಕೆಲವು ಮಾದರಿಗಳಿವೆ. ಈ ಸಂಬಂಧ ನ್ಯೂಯಾರ್ಕ್ ನಲ್ಲಿ 150 ಜನರ ಮೇಲೆ ಪ್ರಯೋಗ ನಡೆದಿದೆ.ಮತ್ತು ಅವರೆಲ್ಲರಿಗೆ ಅತೀಂದ್ರಿಯ ಶಕ್ತಿ ಬಗೆಗೆ ಒಂದೇ ಉತ್ತರ ದೊರಕಿದೆ. ನಾನು ನನ್ನ ಚಿತ್ರದಲ್ಲಿ ಕೊಲೆ ರಹಸ್ಯದಲ್ಲಿ ಇದನ್ನು ಬೆರೆಸಿಕೊಂಡಿದ್ದೇನೆ ಎಂದು ಶಿವ ಗಣೇಶ್ ಹೇಳಿದ್ದಾರೆ.
ಈ ಚಿತ್ರದಲ್ಲಿ ರಾಹುಲ್ ಐನಾಪುರ, ಅಜಿತ್ ಜಯರಾಜ್, ಹೃದಯ ಆವಂತಿ,  ಭವಾನಿ ಪ್ರಕಾಶ್, ಯಶ್ ಶೆಟ್ಟಿ, ಅಕ್ಷತಾ, ನಂದಗೊಪಾಲ್  ಎಂಕೆ ಮತ್ತು  ಅಜಯ್ ಶಿರಾರಾಜ್ ಅಭಿನಯಿಸಿದ್ದಾರೆ. ರಾಹುಲ್ ನಿರ್ಮಾಣದ ಈ ಚಿತ್ರಕ್ಕೆ ರುಣ್ ಸೂರಧಾ ಅವರು ಸಂಗೀತ ನಿರ್ದೇಶಕರಾಗಿ ಮತ್ತು ವಿನೋದ್ ಭಾರತಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com