ಇಸ್ಲಾಮಾಬಾದ್: ಭಾರತ ಮೂಲದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸ ‘ಯೋಗ’ ನೆರೆಯ ಪಾಕಿಸ್ತಾನಕ್ಕೂ ಅಧಿಕೃತವಾಗಿ ಕಾಲಿಟ್ಟಿದ್ದು, ಇಸ್ಲಾಮಾಬಾದ್ ಮಹಾನಗರ ಪಾಲಿಕೆಯಿಂದ ತರಗತಿ ಆರಂಭಿಸಲಾಗಿದೆ.
ಹೌದು.. ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಉಸ್ತುವಾರಿ ಹೊಣೆ ಹೊತ್ತಿರುವ ರಾಜಧಾನಿ ಅಭಿವೃದ್ಧಿ ಮಂಡಳಿಯು (ಸಿಡಿಎ) ತನ್ನ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ, ‘ಇಸ್ಲಾಮಾಬಾದ್ ಮಹಾನಗರ ಪಾಲಿಕೆಯು ಎಫ್–9 ಪಾರ್ಕ್‌ನಲ್ಲಿ ಉಚಿತ ಯೋಗ ತರಗತಿ ಆರಂಭಿಸಿದ್ದು, ಹಲವರು ಈಗಾಗಲೇ ತರಗತಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಿಡಿಎ ತಿಳಿಸಿದೆ. ಜೊತೆಗೆ ಜನರು ಯೋಗಾಭ್ಯಾಸ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡಿದೆ.
ಅಂದಹಾಗೆ ವಿಶ್ವಸಂಸ್ಥೆಯು 2014 ಡಿಸೆಂಬರ್ 11ರಂದು ಭಾರತ ಮೂಲದ ಯೋಗಕ್ಕೆ ಜಾಗತಿಕ ಮನ್ನಣೆ ನೀಡಿ ಜೂನ್ 21 ಅನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವೆಂದು ಘೋಷಿಸಿತ್ತು. ಈ ಕುರಿತ ಮಹತ್ವದ ಪ್ರಸ್ತಾವಕ್ಕೆ 175 ರಾಷ್ಟ್ರಗಳು ಅಂದು ಸಹಿ ಹಾಕಿದ್ದವು. ಪಾಕಿಸ್ತಾನದಲ್ಲಿ ಯೋಗವು ಔಪಚಾರಿಕವಾಗಿ ಮಾತ್ರ ಬಳಕೆಯಲ್ಲಿತ್ತು. ಸದ್ಯ ಯೋಗಾಭ್ಯಾಸಕ್ಕೆ ಅಧಿಕೃತ ಮಾನ್ಯತೆ ಸಿಕ್ಕಂತಾಗಿದೆ. ಉಚಿತ ಯೋಗ ತರಬೇತಿ ನೀಡುವ ಕ್ರಮವನ್ನು ಹಲವು ಶ್ಲಾಘಿಸಿದ್ದಾರೆ.
Advertisement