
ಬೆಂಗಳೂರು: ಕೆರೆ ಒತ್ತುವರಿ ಸಂಬಂಧಿಸಿದಂತೆ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸುವ ಬದಲು ಒತ್ತುವರಿದಾರರಿಗೆ ನೇರವಾಗಿ ನೋಟಿಸ್ ನೀಡಲಾಗುತ್ತದೆ ಎಂದು ಬೆಂಗಳೂರಿನಲ್ಲಿ ಒತ್ತುವರಿ ಮತ್ತು ಸಂರಕ್ಷಣೆ ಸದನ ಸಮಿತಿಯ ಅಧ್ಯಕ್ಷ ಕೋಳಿವಾಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಒಟ್ಟು ಒಂದು ಲಕ್ಷ ಕೋಟಿ ರೂ. ಮೌಲ್ಯದ ಕೆರೆಯ ಜಾಗ ಒತ್ತುವರಿಯಾಗಿದೆ. ಶೋಭಾ ಡೆವಲಪರ್ಸ್, ಒಬೇರಾಯ್ ಗ್ರೂಪ್, ವಾಲ್ ಮಾರ್ಟ್, ಗ್ರೀನ್‌ವುಡ್ ಗ್ರೂಪ್ ಮುಂತಾದ ದೊಡ್ಡ, ದೊಡ್ಡ ಕಂಪನಿಗಳು ಒತ್ತುವರಿ ಮಾಡಿ ಕಟ್ಟಡಗಳನ್ನು ಕಟ್ಟಿಸಿವೆ ಎಂದು ಸದನ ಸಮಿತಿ ಮಾಹಿತಿಯಲ್ಲಿ ತಿಳಿಸಿದೆ.
ಕೆರೆ ಒತ್ತುವರಿಯಲ್ಲಿ ಭೂಗಳ್ಳರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಸದನ ಸಮಿತಿ ಹೇಳಿದೆ. 23 ಕೆರೆಗಳನ್ನು ಒತ್ತುವರಿ ಮಾಡಿಕೊಂಡ ಬಿಡಿಎಗೂ ಕೂಡ ನೋಟಿಸ್ ನೀಡಲಾಗಿದೆ.
Advertisement