
ಬೆಂಗಳೂರು: ಪಡಿತರ ಆಹಾರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ರಾಜ್ಯದಲ್ಲಿ ನಿಗಾ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಯೋಜಿಸಿದ್ದ 30 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ಪಡಿತರ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಲು ಈಗಾಗಲೇ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಅವುಗಳು ಸಂಚರಿಸುವ ಮಾರ್ಗ ತಿಳಿಯಲು ನಿಗಾ ಘಟಕಗಳನ್ನು ಸ್ಥಾಪಿಸಲಾಗುವುದು, ಇದರಿಂದ ಲಾರಿಗಳು ಯಾವ ಮಾರ್ಗದಲ್ಲಿ ಚಲಿಸುತ್ತವೆ ಸರಿಯಾದ ಸಮಯಕ್ಕೆ ನಿಗದಿ ಪಡಿಸಿದ ಸ್ಥಳವನ್ನು ತಲುಪಿದೆಯೇ ಎಂಬ ಮಾಹಿತಿಯನ್ನು ನಿಗಾ ಘಟಕಗಳು ಪತ್ತೆ ಹಚ್ಚಲಿವೆ ಎಂದರು.
ಇಲಾಖೆ ಪಡಿತರ ಚೀಟಿಯೊಂದಿಗೆ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಜೋಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಮುಂದಿನ ಆರು ಆರು ತಿಂಗಳೊಳಗೆ ರಾಜ್ಯದ ಎಲ್ಲಾ ಪಡಿತರ ಪಡೆಯುವವರ ಮಾಹಿತಿ , ಇಲಾಖೆಗೆ ಲಭ್ಯವಾಗಲಿದೆ. ಈ ಮೂಲಕ ರಾಜ್ಯದಲ್ಲಿನ ನಕಲಿ ಪಡಿತರ ಕಾರ್ಡ್ ಗಳನ್ನು ರದ್ದು ಪಡಿಸಬಹುದಾಗಿದೆ. ಕಳೆದ ಎರಡು ವರೆ ವರ್ಷದಲ್ಲಿ 10 ಲಕ್ಷ ನಕಲಿ ಪಡಿತರ ಕಾರ್ಡ್ ಗಳನ್ನು ರದ್ದು ಪಡಿಸಿದ್ದು, 20 ಲಕ್ಷ ಹೊಸ ಪಡಿತರ ಕಾರ್ಡ್ ಗಳನ್ನು ವಿತರಿಸಲಾಗಿದೆ. ಈ ಅವಧಿಯಲ್ಲಿ ಇಲಾಖೆ ಒಮ್ಮೆಯೂ ಪಡಿತರ ವಿತರಣೆಯನ್ನೂ ನಿಲ್ಲಿಸಿಲ್ಲ. ಪಡಿತರ ವಿತರಣೆಯನ್ನು ನಿಲ್ಲಿಸಿಲ್ಲ. ಪಡಿತರ ವಿತರಣೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿಯಾಗಿದ್ದು, ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಡಿತರ ವಿತರಕರು ಕೆಲಸ ಮಾಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರ ಪಡಿತರ ವಿತರಕರಿಗೆ ಕ್ವಿಂಟಾಲ್ ಗೆ 36.ರು ಕಮಿಷನ್ ನೀಡುತ್ತಿದ್ದು, ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದ ನಂತರ ಕೇಂದ್ರ ಸರ್ಕಾರ 34 ರು. ನೀಡುತ್ತಿದ್ದು, ಪಡಿತರ ವಿತರಕರು ಕಳೆದ ಏಪ್ರಿಲ್ ನಿಂದ ಬಾಕಿ ಇರುವ ಹಣವನ್ನು ಪಡೆಯಲು ಬೇಕಾದ ಅಗತ್ಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಹೇಳಿದರು.
Advertisement