ಬಿಎಂಟಿಸಿ ಕಲ್ಯಾಣ ಮಂಟಪ ಸಂಸ್ಥೆಗೆ ಶೀಘ್ರದಲ್ಲೇ ವಾಪಸ್

ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳಿಂದ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿರ್ಮಾಣ ಮಾಡಲಾಗಿರುವ ಕಲ್ಯಾಣ ಮಂಟಪವನ್ನು ತಿಂಗಳಲ್ಲಿ ಖಾಸಗಿಯವರಿಂದ ಸಂಸ್ಥೆಯ ವಶಕ್ಕೆ ಪಡೆಯಲಾಗುವುದು ಎಂದು ಬಿಎಂಟಿಸಿ ಉಪಾಧ್ಯಕ್ಷ ವಿ.ಎಸ್.ಆರಾಧ್ಯ ತಿಳಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಕೆಎಸ್‍ಆರ್‍ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳಿಂದ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ನಿರ್ಮಾಣ ಮಾಡಲಾಗಿರುವ ಕಲ್ಯಾಣ ಮಂಟಪವನ್ನು ತಿಂಗಳಲ್ಲಿ ಖಾಸಗಿಯವರಿಂದ ಸಂಸ್ಥೆಯ ವಶಕ್ಕೆ ಪಡೆಯಲಾಗುವುದು ಎಂದು ಬಿಎಂಟಿಸಿ ಉಪಾಧ್ಯಕ್ಷ ವಿ.ಎಸ್.ಆರಾಧ್ಯ ತಿಳಿಸಿದ್ದಾರೆ.

ಶುಕ್ರವಾರ ನಂಗರದಲ್ಲಿ ಕೆಎಸ್ಆರ್ ಟಿಸಿಯ ಪ.ಜಾ/ಪ.ಪಂ. ನೌಕರರ ಸಂಘ ಆಯೋಜಿಸಿದ್ದ '2016ರ ಕ್ಯಾಲೆಂಡರ' ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಇಲಾಖೆಗಳಿಂದ ಕಟ್ಟಿರುವ ಕಲ್ಯಾಣ ಮಂಟಪವನ್ನು ಖಾಸಗಿಯವರಿಗೆ ಭೋಗ್ಯಕ್ಕೆ ನೀಡಲಾಗಿದ್ದು, ಅವರು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಜೊತೆಗೆ ಸಂಸ್ಥೆಯ ನೌಕರರಿಂದಲೂ ಅಷ್ಟೇ ಪ್ರಮಾಣದ ಹಣವನ್ನು ವಸೂಲಿ ಮಾಡಿದ್ದು, ಕಲ್ಯಾಣ ಮಂಟಪವನ್ನು ಸಂಸ್ಥೆಯ ವಶಕ್ಕೆ ಪಡೆದು ಸಂಸ್ಥೆಗಳ ನೌಕರರಿಗೆ ಕಡಿಮೆ ಮೊತ್ತಕ್ಕೆ ನೀಡಲಾಗುವುದು. ಇಲಾಖೆಯಲ್ಲಿರುವ ನೌಕರರಿಗಿಂತ ಅವರ ಮೇಲಿನ ಕೇಸುಗಳು ಹಾಗೂ ನೋಟಿಸುಗಳ ಸಂಖ್ಯೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಕಡಿಮೆ ಮಾಡುವ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಘದ ರಾಜ್ಯಧ್ಯಕ್ಷ ಎಫ್.ಎಚ್.ಜಕ್ಕಪ್ಪ ಅವರು ಮಾತನಾಡಿ, ಸರ್ಕಾರದಿಂದ ಸರ್ಕಾರದಿಂದ 57 ಲಕ್ಷ ಬಿಡುಗಡೆಗೊಂಡಿದ್ದರೂ ಇನ್ನೂ ಅಂಬೇಡ್ಕರ್ ಭವನ ಹಾಗೂ ಕ್ರೆಡಿಟ್ ಕೋ-ಅಪರೇಟಿವ್ ಬ್ಯಾಂಕ್ ನಿರ್ಮಾಣಕ್ಕೆ ಅಧಿಕಾರಿಗಳು ಜಾಗವನ್ನು ಗುರುತಿಸಿಲ್ಲ. ಸಂಸ್ಥೆಗೆ ನೇಮಕವಾಗಿ 2 ವರ್ಷಗಳು ಕಳೆದರೂ ನೂರಾರು ಜನರಿಗೆ ಇನ್ನೂ ಉದ್ಯೋಗ ಸಿಕ್ಕಿಲ್ಲ ಹಾಗೂ ವಾಯುವ್ಯ ವಿಭಾಗದಲ್ಲಿ ದಿನಕ್ಕೆ ಇಬ್ಬರು ನೌಕರರನ್ನು ಸಣ್ಣಪುಟ್ಟ ಕಾರಣಗಳಿಗೆ ಅಮಾನತು ಮಾಡಲಾಗುತ್ತಿದೆ ಎಂದು ದೂರಿದರು. ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಟಿಸಿ ಉಪಾಧ್ಯಕ್ಷ ಲೋಹಿತ್ ಡಿ.ನಾಯ್ಕರ ಹಾಗೂ ರಾಜೇಂದ್ರಕುಮಾರ ಕಟಾರಿಯಾ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com