ಧಾರವಾಡದಲ್ಲಿ ಆಹಾರಮೇಳ

ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೊದಲ ಬಾರಿಗೆ ಧಾರವಾಡದಲ್ಲಿ ಐದು ದಿನಗಳ ದೇಸಿ ಆಹಾರ ಮೇಳ ಹಾಗೂ ಜಾನಪದ ನೃತ್ಯ ಹಮ್ಮಿಕೊಳ್ಳಲಾಗಿದೆ...
ಧಾರವಾಡದಲ್ಲಿ ಆಹಾರಮೇಳ (ಸಂಗ್ರಹ ಚಿತ್ರ)
ಧಾರವಾಡದಲ್ಲಿ ಆಹಾರಮೇಳ (ಸಂಗ್ರಹ ಚಿತ್ರ)

ಧಾರವಾಡ: ಉತ್ತರ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೊದಲ ಬಾರಿಗೆ ಧಾರವಾಡದಲ್ಲಿ ಐದು ದಿನಗಳ ದೇಸಿ ಆಹಾರ ಮೇಳ ಹಾಗೂ ಜಾನಪದ ನೃತ್ಯ  ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.

ಭಾನುವಾರ ಮಾತನಾಡಿದ ಅವರು, ಜ. 14 ರಿಂದ 18ರ ವರೆಗೆ ಆಹಾರ ಮೇಳ ಹಮ್ಮಿಕೊಂಡಿದ್ದು, ಮೇಳದಲ್ಲಿ ಸಿದ್ಧ ಆಹಾರ ತಯಾರಿಸುವ ಘಟಕಗಳು, ಉತ್ಪಾದಕರು ಮತ್ತು ವ್ಯಾಪಾರಿ ಸಂಸ್ಥೆಗಳ  ಆಹಾರ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಶಾಖಾಹಾರಿ ಮತ್ತು ಮಾಂಸಾಹಾರಿ ಆಹಾರಗಳನ್ನು ಪ್ಯಾಕೆಟ್ ರೂಪದಲ್ಲಿ ನೀಡಲಾಗುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com