
ಕಾರವಾರ: ಕೈಗಾದಲ್ಲಿ ಭಾನುವಾರ ನಡೆದ ಆರನೇ ಕೈಗಾ ಬರ್ಡ್ ಮಾ್ಯರಾಥಾನ್‍ನಲ್ಲಿ ಅತಿ ಅಪರೂಪದ ಇಂಡಿಯನ್ ವಲ್ಚರ್ ಸೇರಿ ಒಟ್ಟು 20 ಹೊಸ ಪಕ್ಷಿಗಳು
ಪತ್ತೆಯಾದವು.
ಕೈಗಾ ನಿರ್ದೇಶಕ ಎಚ್.ಎನ್. ಭಟ್ ಅವರು ಪಕ್ಷಿ ಗಣತಿ ಉದ್ಘಾಟಿಸಿ, ಪರಿಸರಕ್ಕೆ ಪೂರಕವಾಗಿ ವಿದ್ಯುತ್ ಶಕ್ತಿ ಉತ್ಪಾದಿಸಲು ಕಟಿ ಬದ್ಧವಾಗಿದೆ. ಇಲ್ಲಿನ ಪ್ರತಿ ವರ್ಷದ ಗಣತಿಯಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಂಡಿ ಬಂದಿದೆ ಎಂದರು.
ಬಾಂಬೆ ನ್ಯೂಚುರಲ್ ಹಿಸ್ಟರಿ ಸೊಸೈಟಿಯ ಮುಖ್ಯಸ್ಥ ರಾಜು ಕಸುಂಬೆ ಮಾತನಾಡಿ, ಎನ್ ಪಿಸಿಐಎಲ್ ಪಕ್ಷಿ ಗಣತಿಯಂತಹ ಕಾರ್ಯಕ್ರಮವನ್ನು ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಕೈಗಾ 1,2 ಘಟಕದ ನಿಲಯ ನಿರ್ದೇಶಕ ಸಂಜಯಕುಮಾರ ಕೈಗಾ 3, 4 ಘಟಕದ ನಿಲಯ ನಿರ್ದೇಶಕ ಎಂ.ಪಿ. ಹನ್ಸೋರಾ, ಕೈಗಾ 3,4ನೇ ಘಟಕದ ಮುಖ್ಯ ಅಧೀಕ್ಷಕ ಕೆ.ಕೆ.ಬಜಾಜ್, ಕೈಗಾ ಬರ್ಡ್ ಮ್ಯಾರಾಥಾನ್ ಆಯೋಜನಾ ಸಮಿತಿಯ ಮುಖ್ಯಸ್ಥ ಟಿ.ಪ್ರೇಮಕುಮಾರ ಇದ್ದರು.
ಬೆಳಗ್ಗೆ 5.30ಕ್ಕೆ ಆರಂಭವಾದ ಬರ್ಡ್ ಮ್ಯಾರಾಥಾನ್ ನಲ್ಲಿ ಕೈಗಾ ಉದ್ಯೋಗಿಗಳು, ಶಿರಸಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಕಾರ್ಯಕರ್ತರು ಭಾಗವಹಿಸಿದ್ದರು. ಕರ್ನಾಟಕ ಸೇರಿದಂತೆ ಗೋವಾ, ಕೇರಳ, ಮುಂಬೈ ಗಳಿಂದ ಒಟ್ಟು 150 ಪಕ್ಷಿ ವೀಕ್ಷಕರು ಆಗಮಿಸಿದ್ದರು.
Advertisement