ಕಾಂಗ್ರೆಸ್ ಟಿಕೆಟ್‍ಗೆ ಶುರುವಾಗಿದೆ ಪೈಪೋಟಿ

ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿನ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದ್ದು, ಬಂಟ ಸಮುದಾಯದ ರವಿ ಶಂಕರ ಶೆಟ್ಟಿ ಪರ ಕರಾವಳಿ ಕನ್ನಡಿಗರು ಬ್ಯಾಟಿಂಗ್ ಆರಂಭಿಸಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿನ ಆಕಾಂಕ್ಷಿಗಳ ಪಟ್ಟಿ ಹೆಚ್ಚುತ್ತಿದ್ದು, ಬಂಟ ಸಮುದಾಯದ ರವಿ ಶಂಕರ ಶೆಟ್ಟಿ ಪರ ಕರಾವಳಿ ಕನ್ನಡಿಗರು ಬ್ಯಾಟಿಂಗ್ ಆರಂಭಿಸಿದ್ದಾರೆ.

ಈ ಮಧ್ಯೆ ತಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ಮೇಲ್ಮನೆ ಸದಸ್ಯ ಎಚ್.ಎಂ.ರೇವಣ್ಣ ಹೇಳುವ ಮೂಲಕ ಟಿಕೆಟ್ ಗೆ ಕಾಂಗ್ರೆಸ್ ನಲ್ಲಿ ಭಾರೀ ಪೈ ಪೋಟಿ ಶುರುವಾಗಿದೆ.

ಹೆಬ್ಬಾಳದ ಶಾಸಕರಾಗಿದ್ದ ಎನ್. ಜಗದೀಶ್‍ಕುಮಾರ್ ನಿಧನದಿಂದ  ತೆರವಾಗಿರುವ ಸ್ಥಾನಕ್ಕೆ ಫೆಬ್ರವರಿ 13 ಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಈಗಾಗಲೇ ಹಲವು ಮಂದಿಯ ಹೆಸರು ಕೇಳಿ ಬರುತ್ತಿವೆ. ಅದರಲ್ಲಿ ವಿಧಾನ ಪರಿಷತ್ತಿನ ಹಾಲಿ ಮೂವರು ಸದಸ್ಯರು ಇದ್ದಾರೆ. ಕಳೆದ 2008ರಲ್ಲಿ ಬಿ ಫಾರಂ ಪಡೆದೂ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿಸಿಕೊಂಡಿದ್ದ ರವಿಶಂಕರ್ ಶೆಟ್ಟಿ ಅವರು ಈಗ ಮುಂಚೂಣಿಗೆ ಬಂದಿದ್ದಾರೆ. ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ತಾವೂ ಆಕಾಂಕ್ಷಿ ಎಂದು ಮೇಲ್ಮನೆ ಸದಸ್ಯ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com