
ಬೆಂಗಳೂರು: ಜಲಮಂಡಳಿ ಜ.16ರಂದು ನಗರದ ವಿವಿಧ ವಿಭಾಗಗಳ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾರ್ಯಾಚರಣೆ ನಡೆಸಲಿದೆ.
ನೈಋತ್ಯ ವಿಭಾಗದ ಗಿರಿನಗರ ಸೇವಾಠಾಣೆಯ ವೀರಭದ್ರ ನಗರ, ಕೇಂದ್ರ ವಿಭಾಗದ 2, 7 ಮತ್ತು 8ನೇ ಬೀದಿ, ಜಿ.ಸಿ.ಕಾಲೋನಿ, ಕುಪ್ಪುಸ್ವಾಮಿ ನಾಯ್ಡು ಶಿವಾಜಿನಗರ. ವಾಯವ್ಯ ವಿಭಾಗದ ಅಗ್ರಹಾರ ದಾಸರಹಳ್ಳಿ 1ರಿಂದ 9ನೇ ಅಡ್ಡ ರಸ್ತೆ, ವೃಷಭಾವತಿನಗರ ನಾಗಪುರ. ಆಗ್ನೇಯ ವಿಭಾಗದ ದೊಮ್ಮಲೂರು ಸೇವಾಠಾಣೆಯ ಎಚ್.ಎಲ್ 2ನೇ ಹಂತ ಮತ್ತು ಕೋಡಿಹಳ್ಳಿ ಸಿಎಲ್‍ಆರ್ ಸೇವಾಠಾಣೆಯ ವಿವೇಕನಗರ, ಜೀವನ್ ಬೀಮಾನಗರದ ಸೇವಾಠಾಣೆಯ 10ನೇ ಮುಖ್ಯ ಜೆ.ಬಿನಗರ ಮತ್ತು ಮಿರಿಂಡ ಸ್ಕೂಲ್, ಎಚ್.ಎಲ್.3ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶ ಹಾಗೂ ಕೋರಮಂಗಳ ಸೇವಾ ಠಾಣೆಯ ಕೋರಮಂಗಲ 7ನೇ ಬ್ಲಾಕ್ ಮತ್ತು ಸುತ್ತಮುತ್ತಲಿನ ಪ್ರದೇಶ.
ಉತ್ತರ ವಿಭಾಗದ ಬಾಹುಬಲಿ ನಗರ ಸೇವಾಠಾಣೆಯ ಎ.ಕೆ.ಕಾಲೋನಿ, ಯಲಹಂಕ ಓಲ್ಡ್ ಟೌನ್ಸೇವಾಠಾಣೆ ಸುಗಪ್ಪ ಲೇಔಟ್. ಪಶ್ಚಿಮ ವಿಭಾಗದ ಕೆಂಗೇರಿ ಸೇವಾಠಾಣೆ ಶಿರ್ಕೆ, ಹೊಲಗೇರಿ ಮತ್ತು ಸುತ್ತಮುತ್ತಲಿನ ಪ್ರದೇಶ. ಪೂರ್ವ ವಿಭಾಗದ ಕೆ.ಆರ್. ಪುರಂ ಸೇವಾಠಾಣೆ ಬಟ್ಟರಹಳ್ಳಿ.ಈಶಾನ್ಯ ವಿಭಾಗದ ಆರ್.ವಿ.ಶೆಟ್ಟಿ ಲೇಔಟ್ ಹಾಗೂ ದಕ್ಷಿಣ ವಿಭಾಗದ ಜೆ.ಪಿ.ನಗರ ಸೇವಾಠಾಣೆ ಎಸ್‍ಎಂಎಸ್ ಬಡಾವಣೆ, 16 ಮತ್ತು 17ನೇ ಕ್ರಾಸ್, ಜೆ.ಪಿ.ನಗರ 5ನೇ ಘಟ್ಟದಲ್ಲಿ ಕಾರ್ಯಾಚರಣೆ ನಡೆಸಲಾಗುವುದು.
Advertisement