ಬೇರೆ ರಾಜ್ಯದ ಮದ್ಯ ಮಾರಾಟ ತಡೆಗೆ ವಿಶೇಷ ತಂಡ: ಸಚಿವ ತಹಸೀಲ್ದಾರ

ಗೋವಾ, ಆಂಧ್ರಪ್ರದೇಶಗಳಿಂದ ಅಗ್ಗದ ಮದ್ಯ ರಾಜ್ಯದ ಗಡಿ ಭಾಗಗಳಲ್ಲಿ ಒಳ ನುಸುಳುತ್ತಿದ್ದು,ರಾಜ್ಯದ ಆದಾಯಕ್ಕೆ ಹೊಡೆತ ಬೀಳುತ್ತಿದೆ ಅದಕ್ಕಾಗಿ ಗಡಿ ಭಾಗದಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹಾವೇರಿ: ಗೋವಾ, ಆಂಧ್ರಪ್ರದೇಶಗಳಿಂದ ಅಗ್ಗದ ಮದ್ಯ ರಾಜ್ಯದ ಗಡಿ ಭಾಗಗಳಲ್ಲಿ ಒಳ  ನುಸುಳುತ್ತಿದ್ದು,  ರಾಜ್ಯದ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಅದಕ್ಕಾಗಿ ಗಡಿ ಭಾಗದಲ್ಲಿ   ವಿಶೇಷ ಅಬಕಾರಿ ತಂಡ  ರಚಿಸಿ ಅಕ್ರಮ ತಡೆಗಟ್ಟಲಾಗುವುದು ಎಂದು  ಅಬಕಾರಿ ಮತ್ತು    ಮುಜರಾಯಿ ಖಾತೆ ಸಚಿವ  ಮನೋಹರ ತಹಶೀಲ್ದಾರ ಹಾವೇರಿಯಲ್ಲಿ ತಿಳಿಸಿದರು.

ಪ್ರಸಕ್ತ ವರ್ಷ ಅಬಕಾರಿ ಇಲಾಖೆಯಿಂದ 15,200 ಕೋಟಿ ಆದಾಯದ ಗುರಿ ಹೊಂದಲಾಗಿದ್ದು,  ಪೈಕಿ 11 ಸಾವಿರ  ಕೋಟಿ ಸಂಗ್ರಹವಾಗಿದೆ. ಮಾರ್ಚ್ ಅಂತ್ಯದ ವೇಳೆಗೆ  ಗುರಿ ತಲುಪುವ ವಿಶ್ವಾಸವಿದೆ. ಆದರೆ, ಬೇರೆ ರಾಜ್ಯಗಳಿಂದ ಬರುವ ಅಗ್ಗದ ಹಾಗೂ ನಕಲಿ ಮದ್ಯದ ಆದಾ ಯಕ್ಕೆ ಹೊಡೆತ ಬಿದ್ದಿದ್ದು, ಶೀಘ್ರದಲ್ಲಿ ಅಕ್ರಮ ತಡೆಗಟ್ಟಲಾಗುವುದು ಎಂದು ಹೇಳಿದರು.

ಸಿ ದರ್ಜೆ ದೇವಸ್ಥಾನಗಳಲ್ಲಿ ಸಿಸಿಟಿವಿ: ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ 160  ಎ ಕೆಟಗರಿ, 154 ಬಿ ಕೆಟಗರಿ, ಮಿಕ್ಕ 34229 ಸಿ ಕೆಟಗರಿ  ದೇವಸ್ಥಾನಗಳಿವೆ. ಎಲ್ಲ    ದೇವಸ್ಥಾನಗಳಿಗೆ ಪ್ರತಿ ವರ್ಷ 36 ಸಾವಿರ ತಸ್ತೀಕ್ ನೀಡಲಾಗುತ್ತಿದೆ. ಎ ಮತ್ತು ಬಿ ದರ್ಜೆ  ದೇವಸ್ಥಾನಗಳು ಬರುವ ವರಮಾನದಿಂದಲೇ ಮೂಲ ಸೌಲಭ್ಯ ಕಲ್ಪಿಸಿಕೊಳ್ಳಬಹುದು. ಭದ್ರತೆ  ದೃಷ್ಟಿಯಿಂದ ಎಲ್ಲ ದೇವಸ್ಥಾನಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಸಿ    ಕೆಟಗರಿ ದೇವಸ್ಥಾನಗಳಿಗೆ ಸರ್ಕಾರದಿಂದಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಅನುದಾನ  ನೀಡಲಾಗುವುದು ಎಂದು ತಿಳಿಸಿದರು.

ಇಲಾಖೆಯಡಿ ಬರುವ ದೇವಸ್ಥಾನಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಆಯಾ ಜೀರ್ಣೋದ್ಧಾರ  ಸಮಿತಿ ನೀಡುವ ವರದಿ ಪರಿಶೀಲಿಸಲು ಈ ಹಿಂದೆ ಧಾರ್ಮಿಕ ದತ್ತಿ ಪರಿಷತ್ತು ಇತ್ತು. ಕೆಲವರು  ನ್ಯಾಯಾಲಯಕ್ಕೆ ಹೋಗಿದ್ದರಿಂದ ಅದು ರದ್ದುಗೊಂಡಿದೆ. ಪರಿಷತ್ತಿನಿಂದ ಉತ್ತಮ ಕಾರ್ಯಗಳು ಆಗುತ್ತಿದ್ದವು. ಆದ್ದರಿಂದ ಈಗ ಮತ್ತೆ ಧಾರ್ಮಿಕ ದತ್ತಿ ಪರಿಷತ್ತನ್ನು ಆರಂಭಿಸಲು   ನ್ಯಾಯಾಲಯಕ್ಕೆ  ಸರ್ಕಾರದಿಂದ ಅಪೀಲು ಸಲ್ಲಿಸಲಾಗುವುದು ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com