ರಾಷ್ಟ್ರೀಯ ಯುವ ಸಪ್ತಾಹದಲ್ಲಿ ವಿವೇಕಾನಂದ ಕಲಾಕೇಂದ್ರ ಪ್ರದರ್ಶಿಸಿದ `ವಿಶ್ವ ವಂದ್ಯ ವಿವೇಕಾನಂದ' ನೃತ್ಯರೂಪಕದ ನರೇಂದ್ರ ಮತ್ತು ವಿವೇಕಾನಂದ ಪಾತ್ರಧಾರಿಗಳನ್ನು ಮುಖ್ಯಮಂತ್ರಿ ಸಿದ್ದ
ರಾಷ್ಟ್ರೀಯ ಯುವ ಸಪ್ತಾಹದಲ್ಲಿ ವಿವೇಕಾನಂದ ಕಲಾಕೇಂದ್ರ ಪ್ರದರ್ಶಿಸಿದ `ವಿಶ್ವ ವಂದ್ಯ ವಿವೇಕಾನಂದ' ನೃತ್ಯರೂಪಕದ ನರೇಂದ್ರ ಮತ್ತು ವಿವೇಕಾನಂದ ಪಾತ್ರಧಾರಿಗಳನ್ನು ಮುಖ್ಯಮಂತ್ರಿ ಸಿದ್ದ

ವಿವೇಕ ನುಡಿ ಆದರ್ಶವಾಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಪ್ಪಾಗಿ ಅರ್ಥೈಸಿದ್ದು, ಅದನ್ನೇ ಸಮಾಜಕ್ಕೆ ಸಾರಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು...

ಬೆಂಗಳೂರು: ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಪ್ಪಾಗಿ ಅರ್ಥೈಸಿದ್ದು, ಅದನ್ನೇ ಸಮಾಜಕ್ಕೆ ಸಾರಲಾಗುತ್ತಿದೆ ಎಂದು ಮುಖ್ಯಮಂತ್ರಿ
ಸಿದ್ದರಾಮಯ್ಯ ತಿಳಿಸಿದರು.

ಸ್ವಾಮಿ ವಿವೇಕಾನಂದ ಅವರ 153ನೇ ಜನ್ಮ ದಿನಾಚರಣೆ ಅಂಗವಾಗಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ `ರಾಷ್ಟ್ರೀಯ ಯುವ ಸಪ್ತಾಹ'ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೇದಾಂತ ಜಾತ್ಯತೀತ ರಾಷ್ಟ್ರ ವಾಗಿರುವ ಭಾರತದ ಮೆದುಳು, ಇಸ್ಲಾಂ ದೇಹವಿದ್ದಂತೆ ಎಂದು ಸ್ವಾಮಿ ವಿವೇಕಾನಂದರೇ ಹೇಳಿದ್ದರು.

`ಹಿಂದೂ- ಮುಸ್ಲಿಂ ಒಗ್ಗೂಡಿದರೆ ದೇಶ ಉದಾಟಛಿರವಾಗಲಿದೆ. ಧರ್ಮ ಎಂದರೆ ಜಾತಿ, ವರ್ಗಗಳಿಗೆ ಸೀಮಿತವಲ್ಲ, ಅದು ಸಾಕ್ಷಾತ್ಕಾರ' ಎಂಬ ವಿವೇಕ ನುಡಿಗಳು ಯುವಜನರಿಗೆ ಆದರ್ಶವಾಗಬೇಕು ಎಂದರು. ಭಾರತದಲ್ಲಿ ಶೇ.70ರಷ್ಟು ಜನತೆ 40 ವರ್ಷದೊಳಗಿನವರಾಗಿದ್ದಾರೆ. ಯುವ ಜನತೆ ಎಚ್ಚೆತ್ತುಕೊಂಡು ವಿವೇಕಾನಂದರ ಮಾರ್ಗದಲ್ಲಿ ನಡೆದರೆ ಜಾತ್ಯತೀತ ರಾಷ್ಟ್ರ ಹಾಗೂ ಮನುಷ್ಯನ ಬದುಕು ಹಸನಾದರೆ ಸಮೃದ್ಧ ರಾಷ್ಟ್ರ ನಿರ್ಮಾಣ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ವಿದ್ಯೆ, ಅವಕಾಶಗಳು ಯಾರದೇ ಸ್ವತ್ತಲ್ಲ. ದೇಶದಲ್ಲಿ ಕೆಲವೇ ಕೆಲವರಿಗೆ ದೊರೆಯುತ್ತಿದ್ದ ಅವಕಾಶಗಳು ಎಲ್ಲರಿಗೂ ಸಿಗಬೇಕೆಂಬ ಉದ್ದೇಶದಿಂದಲೇ ವಿವೇಕಾನಂದರು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು. ಇತಿಹಾಸದ ಆಧ್ಯಾತ್ಮಿಕ ನಾಯಕರಲ್ಲಿ ವಿವೇಕಾನಂದರು ಅಗ್ರಗಣ್ಯರಾಗಿದ್ದಾರೆ ಎಂದು ತಿಳಿಸಿದರು.

ಸಾಮರಸ್ಯ ದಿನವಾಗಲಿ: ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಸಾಮರಸ್ಯದ ಮಂತ್ರ ಪಠಣ ಮಾಡಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು `ಸಾಮರಸ್ಯ ದಿನ'ವಾಗಿ ಆಚರಿಸಲು ಸಲಹೆ ನೀಡಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ಅಭಯಚಂದ್ರ ಜೈನ್, ರೋಷನ್ ಬೇಗ್, ಮೇಯರ್ ಬಿ.ಎನ್. ಮಂಜುನಾಥರೆಡ್ಡಿ ಹಾಜರಿದ್ದರು.

Related Stories

No stories found.

Advertisement

X
Kannada Prabha
www.kannadaprabha.com