ಶ್ರೀರಂಗಪಟ್ಟಣದಲ್ಲಿ ಮೋದಿ ಹತ್ಯೆಗೆ ಸ್ಕೆಚ್

ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಈ ಹಿಂದೆ ನಡೆದಿದ್ದ ಸಂಚು ಪ್ರಕರಣ ಸಂಬಂಧ ಉಗ್ರರು ಶ್ರೀರಂಗಪಟ್ಟಣಕ್ಕೂ ಭೇಟಿ...
ಪ್ರಧಾನ ಮಂತ್ರಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಈ ಹಿಂದೆ ನಡೆದಿದ್ದ ಸಂಚು ಪ್ರಕರಣ ಸಂಬಂಧ ಉಗ್ರರು ಶ್ರೀರಂಗಪಟ್ಟಣಕ್ಕೂ ಭೇಟಿ ನೀಡಿ ವ್ಯೂಹ ರೂಪಿಸಿದ್ದರೆಂಬ ಮಾಹಿತಿ ಬೆಳಕಿಗೆ ಬಂದಿದೆ.

ಮೋದಿ ಜನವರಿ 1, 2ರಂದು ಮೈಸೂರಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಂದರ್ಭವನ್ನು ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ದರು. ಆದರೆ, ಕೇಂದ್ರ ಗುಪ್ತಚರ ಇಲಾಖೆ ಮತ್ತು ಜಿಲ್ಲಾ ಪೊಲೀಸರ ಮುಂಜಾಗ್ರತಾ ಕ್ರಮಗಳಿಂದ ಯಾವುದೇ ಕೃತ್ಯ ನಡೆಯಲಿಲ್ಲ.

ಲಾಡ್ಜ್ ನಲ್ಲಿ ತಂಗಿರುವ ಶಂಕೆ: ಪ್ರಧಾನ ಮಂತ್ರಿಗಳನ್ನು ಟಾರ್ಗೆಟ್ ಮಾಡಿಕೊಂಡು ಜನವರಿ 1ರಂದೇ ಉಗ್ರರು ಮಂಡ್ಯ ಹಾಗೂ ಶ್ರೀರಂಗಪಟ್ಟಣದ ಲಾಡ್ಜ್ ಗಳಲ್ಲಿ ತಂಗಿದ್ದ ಉಗ್ರರು, ಮೋದಿ ಅವರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು.

ಜತೆಗೆ ಶ್ರೀರಂಗಪಟ್ಟಣದಲ್ಲೂ ಲಾಡ್ಜ್ ನಲ್ಲಿ ತಂಗಿದ್ದ ಉಗ್ರರಿಗೆ ಪಾಕಿಸ್ತಾನದಿಂದ ದೂರವಾಣಿ ಕರೆಯೊಂದು ಬಂದಿತ್ತು ಎಂಬ ಮಾಹಿತಿ ಲಭ್ಯವಾಗಿತ್ತು. ಪರಿಶೀಲಿಸಿದರೆ ಪತ್ತೆಯಾಗಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com