ನೀರಿದ್ದ ಜಾಗದಲ್ಲಿ ಕಾಂಕ್ರೀಟ್ ಕಾಡು...!

ನಗರಕ್ಕೆ ಹತ್ತಿರುವಿರುವ ದಕ್ಷಿಣ ತಾಲೂಕಿನಲ್ಲಿ ಭೂಮಿಯ ಜಾಗಕ್ಕೆ ಚಿನ್ನದ ಬೆಲೆ ಇದೆ. ಇಲ್ಲಿ ಒಂದು ಎಕರೆ ಹೊಂದುವುದು ಒಂದೇ, ಹೊರ ವಲಯದಲ್ಲಿ 10 ಎಕರೆ ಹೊಂದುವುದೂ ಒಂದೇ. ಹೀಗಿರುವಾಗ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ನಗರಕ್ಕೆ ಹತ್ತಿರುವಿರುವ ದಕ್ಷಿಣ ತಾಲೂಕಿನಲ್ಲಿ ಭೂಮಿಯ ಜಾಗಕ್ಕೆ ಚಿನ್ನದ ಬೆಲೆ ಇದೆ. ಇಲ್ಲಿ ಒಂದು ಎಕರೆ ಹೊಂದುವುದು ಒಂದೇ, ಹೊರ ವಲಯದಲ್ಲಿ 10 ಎಕರೆ ಹೊಂದುವುದೂ ಒಂದೇ. ಹೀಗಿರುವಾಗ ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಖಾಸಗಿ ವ್ಯಕ್ತಿಗಳ ಕೈ ಚಳಕದ ಚತೆಗೆ, ಸರ್ಕಾರದ ಅಂಗ ಸಂಸ್ಥೆಗಳಾದ ಬಿಡಿಎ, ಕಂದಾಯ, ಆರೋಗ್ಯ ಇಲಾಖೆಗಳೂ ಎಗ್ಗಿಲ್ಲದೆ ಒತ್ತುವರಿ ನಡೆಸಿವೆ. ಬಿಡಿಎ ಅಂತೂ ಬಕಾಸುರನಂತೆ ತನ್ನ ಕಬಂಧಬಾಹುವನ್ನು ಚಾಚಿ ಭೂಮಿಯನ್ನು ನುಂಗಿ ನೀರು ಕುಡಿದೆದ .

ಬೆಂಗಳೂರು ದಕ್ಷಿಣ ತಾಲೂಕಿನಲ್ಲಿ ಒಟ್ಟು ನಾಲ್ಕು ಹೋಬಳಿಗಳಿವೆ. ಇಲ್ಲಿ 4356 ಎಕರೆ ಪ್ರದೇಶದಲ್ಲಿ 201 ಕೆರೆಗಳು ಹರಡಿಕೊಂಡಿದ್ದವು. ಭೂ ಮಾಫಿಯ ಬೇರು ಬಿಟ್ಟಂತೆ 767.25 ಎಕರೆ ಒತ್ತುವರಿಯಾಗಿದೆ. ಈ ಪೈಕಿ 347.9 ಎಕರೆ ಸರ್ಕಾರಿ ಒತ್ತುವರಿ ಹಾಗೂ 420.16 ಎಕರೆ ಖಾಸಗಿ ಒತ್ತುವರಿಯಾಗಿದೆ. ಇನ್ನು ಒತ್ತುವರಿ ನಂತರ 3337.31 ಎಕರೆ ಕೆರೆಯ ಜಾಗ ಉಳಿದಿದೆ. ಆದರೆ, ಕೆರೆಯ ಮೂಲ ಸ್ವರೂಪದಲ್ಲಿರುವುದು 23 ಕೆರೆಗಳ 250.24 ಎಕರೆ ಮಾತ್ರ.

ಬೇಗೂರು ಹೋಬಳಿಯ ಇಬ್ಬಲೂರು ಸರ್ವೆನಂಬರ್ 36ರಲ್ಲಿ ಸ್ಮಶಾನ, ದೇವಸ್ಥಾನ, ಶೋಭಾ ಅಪಾರ್ಟ್ ಮೆಂಟ್, ಬಿ.ಪಿ.ಪಾಪಣ್ಣ ರೆಡ್ಡಿ ಮತ್ತು ಮಕ್ಕಳು 9.19 ಎಕರೆ, ಹುಳಿಮಾವು ಸ.ನಂ.42ರಲ್ಲಿ ಅದ್ವೈತ ಅಪಾರ್ಟ್ ಮೆಂಟ್, ಭಾನುಪ್ರಿಯಾ ಎಂಟರ್ ಪ್ರೈಸಸ್, ಅಂಕುರ್ ಟ್ರೇಡಿಂಗ್ ಕಂಪನಿ, ಭಗವತ್ ಪಾಠ ಪ್ರವಚನ ಮಂದಿನ, ವಿಕ್ಟರ್ ಗ್ರೇಸ್, ಸಾಯಿಬಾಬಾ ದೇವಸ್ಥಾನ, ವೈಷ್ಣೋವಿ ದೇವಸ್ಥಾನ, ಚೌಡೇಶ್ವರಿ ದೇವಸ್ಥಾನ ಸೇರಿ 18 ಮಂದಿಯಿಂದ 19.26 ಎಕರೆ, ವೆಂಕೋಜಿ ರಾವ್ ಖಾನೆಯ ಸ.ನಂ.11ರಲ್ಲಿ ಸಾಯಿ ಪಿಜಿ ಸೆಂಚರ್ ಪಿಆಱ್ ಒ ಸೈಕಲ್ ಅಂಗಡಿ ಎನಜೈಮ್ ಟೆಕ್ ಪಾರ್ಕ್, ವಂದನಾ ಸಾಗರ ಅಪಾರ್ಟ್ ಮೆಂಟ್ ಸೇರಿ 9ಮಂದಿಯಿಂದ 28.26 ಎಕರೆ ಅಗರ ಸ.ನಂ.11ರಲ್ಲಿ ಜಗನ್ನಾಥ ದೇವಸ್ಥಾನ, ದೇವಸ್ಥಾನ ಟ್ರಸ್ಟ್, ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ 10 ಮಂದಿಯಿಂದ 5.30 ಎಕರೆ, ಕೋನಪ್ಪನ ಅಗ್ರಹಾರ ಸ.ನಂ.51ರಲ್ಲಿ ಸ್ಲಂ ನಿವಾಸಿಗಳು ಸೇರಿ 6 ಮಂದಿಯಿಂದ 7.26 ಎಕರೆ ಒತ್ತುವರಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com