ಮಾತುಕತೆಗೆ ನಿರಾಕರಣೆ, ತೀರ್ಪು ಬರುವವರೆಗೂ ಕಾಯಿರಿ: ಮಹಾದಾಯಿ ಸಂಬಂಧ ಸಿಎಂ ಗೆ ಉಮಾಭಾರತಿ ಪತ್ರ

ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಕರ್ನಾಟಕದ ಮಾತುಕತೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸಿಎಂ....
ಸಿದ್ದರಾಮಯ್ಯ ಮತ್ತು ಉಮಾಭಾರತಿ
ಸಿದ್ದರಾಮಯ್ಯ ಮತ್ತು ಉಮಾಭಾರತಿ
Updated on

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ಕುರಿತಂತೆ ಕರ್ನಾಟಕದ ಮಾತುಕತೆ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ  ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸಿದ್ದವಿದ್ದ ರಾಜ್ಯ ಸರ್ಕಾರಕ್ಕೆ ನಿರಾಶೆಯಾಗಿದೆ. ಮಾತುಕತೆಗೆ ಉಮಾಭಾರತಿ ನಿರಾಕರಿಸಿರುವುದು ಉತ್ತರ ಕರ್ನಾಟಕದ ಭಾಗದ ಜನರಿಗೆ ಆಘತವಾಗಿದೆ. ಅಂತಿಮ ತೀರ್ಪು ಬರುವವರೆಗೆ ಕಾಯಿರಿ, ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಡಿ ಎಂದು ಉಮಾಭಾರತಿ ಪತ್ರದಲ್ಲಿ ಹೇಳಿದ್ದಾರೆ,

ಗೋವಾ ಮುಖ್ಯಮಂತ್ರಿ ಕೂಡ ಅದೇ ರೀತಿಯ ಪತ್ರ ಬರೆದಿರುವುದು  ಉತ್ತರ ಕರ್ನಾಟಕ ಭಾಗದ ಜನರು ನೂರಾರು ದಿನಗಳಿಂದ ಮಾಡುತ್ತಿದ್ದ ಪ್ರತಿಭಟನೆಯು ಈಗ ನೀರಿನಲ್ಲಿ ಹೋಮಮಾಡಿದಂತಾಗಿದೆ.  ಅಪ್ಪ, ಅಮ್ಮ ಜಗಳದಿಂದ ಕೂಸು ಬಡವಾಯ್ತು ಎಂಬ ಹಾಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವೈಮನಸ್ಸಿನಿಂದ ಕರ್ನಾಟಕದ ಉತ್ತರಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com