ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಹುದ್ದೆ ಖಾಲಿ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಒಟ್ಟು 25 ಸಾವಿರದ 749 ಪೊಲೀಸ್ ಹುದ್ದೆಗಳು ಖಾಲಿಯಿವೆ ಎಂದು...

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಒಟ್ಟು 25 ಸಾವಿರದ 749 ಪೊಲೀಸ್ ಹುದ್ದೆಗಳು ಖಾಲಿಯಿವೆ ಎಂದು ಹೈಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಅಂಕಿಅಂಶ ಕುರಿತು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ನೀಡಿದ್ದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ನೇಮಕಾತಿ ಮತ್ತು ತರಬೇತಿ ವಿಭಾಗ) ರಾಘವೇಂದ್ರ ಔರಾದ್ಕರ್ ಹೈಕೋರ್ಟ್ ಶುಕ್ರವಾರ ಪ್ರಮಾಣ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಎಯಿಂದ ಡಿ ವೃಂದದವರೆಗೆ ಒಟ್ಟು 99 ಸಾವಿರದ 189 ಪೊಲೀಸ್ ಕಾರ್ಯ ನಿರ್ವಾಹಕ ಹುದ್ದೆಗಳು ಭರ್ತಿಯಾಗಿದ್ದು, 25 ಸಾವಿರದ 749 ಹುದ್ದೆಗಳು ಖಾಲಿಯಿವೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸ್ ಪೇದೆಗಳ ಹುದ್ದೆಗಳು ಖಾಲಿಯಿವೆ ಎಂದು ಮಾಹಿತಿ ನೀಡಿದ್ದಾರೆ.

ಸಚಿವಾಲಯ ಸೇರಿದಂತೆ ತಾಂತ್ರಿಕ ವಿಭಾಗದಲ್ಲಿ 1, 03, 457 ಹುದ್ದೆಗಳು ಮಂಜೂರಾಗಿದ್ದು, 74 ಸಾವಿರದ 389 ಭರ್ತಿಯಾಗಿವೆ. 27 ಸಾವಿರದ 068 ಹುದ್ದೆಗಳು ಖಾಲಿಯಿವೆ. ಒಟ್ಟಾರೆ ಎಯಿಂದ ಡಿ ವೃಂದದವರೆಗೆ ಶೇಕಡಾ 25ರಷ್ಟು ಕಾರ್ಯನಿರ್ವಾಹಕ ಹುದ್ದೆಗಳು ಪೊಲೀಸ್ ಇಲಾಖೆಯಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವುದಾಗಿ ತಿಳಿಸಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com