ಪಿಎಚ್‌ಡಿ ಗಾಗಿ 10 ಸಾವಿರ ವಿದ್ಯಾರ್ಥಿಗಳನ್ನು ಅಮೆರಿಕಾಗೆ ಕಳುಹಿಸಿ: ನಾರಾಯಣ ಮೂರ್ತಿ

ಅಮೆರಿಕಾದಲ್ಲಿ ಪಿಎಚ್ ಡಿ ಅಧ್ಯಯನ ಮಾಡಲು ಪ್ರತಿವರ್ಷ ಭಾರತದಿಂದ 10 ಸಾವಿರ ವಿದ್ಯಾರ್ಥಿಗಳನ್ನು ಕಳುಹಿಸಿ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ...
ಎನ್. ಆರ್.ನಾರಾಯಣ ಮೂರ್ತಿ
ಎನ್. ಆರ್.ನಾರಾಯಣ ಮೂರ್ತಿ

ಬೆಂಗಳೂರು: ಅಮೆರಿಕಾದಲ್ಲಿ ಪಿಎಚ್ ಡಿ ಅಧ್ಯಯನ ಮಾಡಲು ಪ್ರತಿವರ್ಷ ಭಾರತದಿಂದ 10 ಸಾವಿರ ವಿದ್ಯಾರ್ಥಿಗಳನ್ನು ಕಳುಹಿಸಿ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಇಂಡೋ ಅಮೆರಿಕನ್‌ ಚೇಂಬರ್‌ ಆಫ್‌ ಕಾಮರ್ಸ್‌ ಕಾನ್‌ಕ್ಲೇವ್‌ 2020 ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಸ್‌ಟಿಇಎಮ್‌(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಶಿಕ್ಷಣಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಪಿಎಚ್‌ಡಿ ಮಾಡಲು ನೆರವಾಗುವಂಥ ಒಪ್ಪಂದವನ್ನು ಭಾರತ ಮತ್ತು ಅಮೆರಿಕ ಮಾಡಬೇಕು. ಅದಕ್ಕೆ ಸಂಬಂದಿಸಿದಂತೆ ಪ್ರತಿ ವರ್ಷ 10 ಸಾವಿರದಂತೆ ಮುಂದಿನ 50 ವರ್ಷ ಈ ಕೆಲಸ ಮುಂದುವರಿಯಬೇಕು ಎಂದು ಮೂರ್ತಿ ಸಲಹೆ ನೀಡಿದ್ದಾರೆ.

ಪ್ರತಿ ವರ್ಷ 10 ಸಾವಿರ ವಿದ್ಯಾರ್ಥಿಗಳನ್ನು ಅಮೆರಿಕಾಗೆ ಕಳುಹಿಸುವುದರಿಂದ ಭಾರತದ ಸರಕಾರಕ್ಕೆ ವರ್ಷಕ್ಕೆ 500 ಕೋಟಿ ರೂ .ಖರ್ಚು ಬರಬಹುದು. ಆದರೆ ಭಾರತದ ನಾನಾ ಕ್ಷೇತ್ರಗಳಲ್ಲಿ ಇದರಿಂದ ದೊರೆಯುವ ಲಾಭವನ್ನು ಪರಿಗಣಿಸಿದರೆ ಅದೊಂದು ದೊಡ್ಡ ಮೊತ್ತವಾಗುವುದಿಲ್ಲ. ದೇಶದ ಹಲವು ದೊಡ್ಡ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಕೊಳ್ಳಲು ಇದು ಸಹಾಯವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸ್ವದೇಶಕ್ಕೆ ಮರಳಿ ಇಲ್ಲೇ ಸೇವೆ ಸಲ್ಲಿಸುವಂತೆ ಪಿಎಚ್‌ಡಿ ಮಾಡಲು ಅಮೆರಿಕಕ್ಕೆ ತೆರಳುವ ವಿದ್ಯಾರ್ಥಿಗಳ ಜತೆ ಹಾಗೂ ಅಮೆರಿಕದ ಜತೆ ರ್ಕಾರ ಮೊದಲೇ ಒಪ್ಪಂದ ಮಾಡಿಕೊಳ್ಳಬೇಕು. ಹಾಗೂ ಕನಿಷ್ಠ 10 ವರ್ಷ ವಿದ್ಯಾರ್ಥಿಗಳು ಕೆಲಸ ಮಾಡಲೇ ಬೇಕೆಂದು ಒಪ್ಪಂದ ಮಾಡಿಕೊಳ್ಳುವುದು ಸೂಕ್ತ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com