
ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಅನುಮಾನಾಸ್ಪದ ಸೂಟ್ ಕೇಸ್ ವೊಂದು ಪತ್ತೆಯಾಗಿ ಕೆಲ ಕಾಲ ಆಂತಕದ ವಾತಾವರಣ ನಿರ್ಮಾಣವಾಗಿತ್ತು.
ವಿಮಾನ ನಿಲ್ದಾಣದ ಆಡಳಿತ ಕಚೇರಿ ಕಟ್ಟಡ ಅಲ್ಫಾ- 3ರ ಎದುರು ಸಂಜೆ 7ರ ಸುಮಾರಿಗೆ ಅನಾಮಧೇಯ ಸೂಟ್ ಕೇಸ್ ಪತ್ತೆಯಾಗಿದೆ. ಇದರ ಸಮೀಪದಲ್ಲಿ ಪ್ರಯಾಣಿಕರ ವಿಶ್ರಾಂತಿಗೆ ಗೃಹವಿದ್ದು ಪ್ರಯಾಣಿಕರೊಬ್ಬರು ಸೂಟ್ ಕೇಸ್ ಬಗ್ಗೆ ಮಾಹಿತಿ ನೀಡಿದ್ದರು.
ತಕ್ಷಣ ಎಚ್ಚೆತ್ತುಕೊಂಡ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರುಗೆ ವಿಷಯ ಮುಟ್ಟಿಸಿದ್ದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರ ತಂಡ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸೂಟ್ ಕೇಸ್ ಪರಿಶೀಲನೆ ನಡೆಸಿ, ಅದೊಂದು ಖಾಲಿ ಸೂಟ್ ಕೇಸ್ ಎಂಬುದನ್ನು ಖಚಿತಪಡಿಸಿದ ಬಳಿಕ ಎಲ್ಲರೂ ನಿಟ್ಟುಸಿರುಬಿಟ್ಟರು.
ಸೂಟ್ ಕೇಸ್ ಪತ್ತೆಯದ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಈಶಾನ್ಯ ವಿಭಾಗದ ಡಿಸಿಪಿ ಹರ್ಷಾಅವರು ಪರಿಶೀಲನೆ ನಡೆಸಿದರು. ಇದೊಂದು ಖಾಲಿ ಸೂಟ್ ಕೇಸ್, ಹಾಗಾಗಿ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಈಗಾಗಲೇ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement