ಬ್ರೇಕ್ ಫೇಲಾದ ಬಿಎಂಟಿಸಿ: ಪ್ರಯಾಣಿಕರ ಪ್ರಾಣ ಉಳಿಸಿದ ಚಾಲಕ

ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಿಎಂಟಿಸಿ ಬಸ್ ಬ್ರೇಕ್ ಫೇಲಾದ ಕಾರಣ, ಪ್ರಯಾಣಿಕರನ್ನು ರಕ್ಷಣೆಮಾಡಲು ತಾನೇ ರಸ್ತೆ ವಿಭಜಕಕ್ಕೆ ಗುದ್ದಿರುವ ಘಟನೆ ಕಾರ್ಪೊರೇಷನ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಬಿಎಂಟಿಸಿ ಬಸ್ ಬ್ರೇಕ್ ಫೇಲಾದ ಕಾರಣ, ಪ್ರಯಾಣಿಕರನ್ನು ರಕ್ಷಣೆಮಾಡಲು ತಾನೇ ರಸ್ತೆ ವಿಭಜಕಕ್ಕೆ ಗುದ್ದಿರುವ ಘಟನೆ ಕಾರ್ಪೊರೇಷನ್ ಬಳಿ ಶನಿವಾರ ಮಧ್ಯಾಹ್ನ ನಡೆದಿದೆ.

ಡಿಪೋ ನಂಬರ್ 38ಕ್ಕೆ ಸೇರಿದ ಬಿಎಂಟಿಸಿ ಬಸ್ ಎಲೆಕ್ಟ್ರಾನಿಕ್ ಸಿಟಿಯಿಂದ ಮಾರುಕಟ್ಟೆ ಕಡೆಗೆ ಹೋಗುವಾಗ ಕಾರ್ಪೊರೇಷನ್ ಬಳಿ ಬ್ರೇಕ್ ಫೇಲಾಗಿದೆ. ಇದನ್ನರಿತ ಚಾಲಕ ಕೂಡಲೇ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ವಿಷಯ ತಿಳಿಸಿ, ಹೆದರಬೇಡಿ, ಬಸ್ ನ ಕಂಬಿಯನ್ನು ಬಿಗಿಯಾಗಿ ಹಿಡಿದುಕೊಳ್ಳಿ ಎಂದು ಹೇಳಿ, ತಾನೇ ರಸ್ತೆ ವಿಭಜಕಕ್ಕೆ ಗುದ್ದಿದ್ದಾನೆ. ಪರಿಣಾಮ ಡಿವೈಡರ್ ಮೇಲೆ ಬಸ್ ಏರಿದೆ.

ಇದರಿಂದಾಗಿ ರಸ್ತೆಯಲ್ಲಿ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ಬಸ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com