ಪ್ರೇಮಿಗಳ ದಿನದಂದು ಎಂ.ಜಿ.ರಸ್ತೆ 'ಓಪನ್ ಸ್ಟ್ರೀಟ್'

ನಗರದ ಜನತೆಗೆ ವಾಹನ ದಟ್ಟಣೆ ಕುರಿತು ಹಾಗೂ ಸಾರ್ವಜನಿಕ ವಾಹನ ಬಳಸುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ಹತ್ತಾರು ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪ್ರೇಮಿಗಳ ದಿನದಂದು ನಗರದ ಪ್ರತಿಷ್ಠಿತ ಮಹಾತ್ಮಗಾಂಧಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ನಗರದ ಜನತೆಗೆ ವಾಹನ ದಟ್ಟಣೆ ಕುರಿತು ಹಾಗೂ ಸಾರ್ವಜನಿಕ ವಾಹನ ಬಳಸುವಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರ ಭೂ ಸಾರಿಗೆ ನಿರ್ದೇಶನಾಲಯ ಹತ್ತಾರು ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪ್ರೇಮಿಗಳ ದಿನದಂದು ನಗರದ ಪ್ರತಿಷ್ಠಿತ ಮಹಾತ್ಮಗಾಂಧಿ ರಸ್ತೆಯಲ್ಲಿ ಓಪನ್ ಸ್ಟ್ರೀಟ್ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರಾದ ಮಂಜುಳಾ, ಫೆ.14ರಂದು ನಗರದ ಎಂ.ಜಿ.ರಸ್ತಯ ಅನಿಲ್ ಕುಂಬ್ಳೆ ವೃತ್ತದಿಂದ ಬ್ರಿಗೇಡ್ ರಸ್ತೆಯವರೆಗೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಗೀತಗಾರರು, ಕಲಾವಿದರಿಂದ ಇಡೀ ದಿನ ಸಾಂಸ್ಕೃತಿಕ ಮನರಂಜನೆ ಇರುತ್ತದೆ. ಬುಸ್ಕಿಂಗ್, ಸ್ಕೇಟಿಂಗ್, ಫೇಡ್ ಸ್ಕೇಟಿಂಗ್ ಜತೆಗೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಆ ದಿನ ದೇಶಿ ಸೊಗಡಿನ ಆಟಗಳನ್ನು ಸಹ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅಲ್ಲದೇ ಸಾವಯವ ವಸ್ತುಗಳ ಮಾರಾಟಕ್ಕೆ ಮಳಿಗೆಗಳು, ಆಹಾರ ಪದಾರ್ಥದ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಕರಕುಶಲಕರ್ಮಿಗಳು ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಎಂ.ಜಿ.ರಸ್ತೆಯಲ್ಲಿರುವ ಮೆಟ್ರೋ ರಂಗೋಲಿ ಸೆಂಟರ್ ನಲ್ಲಿ ಫೆ.4 ರಿಂದ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಾರದ ಎಲ್ಲ ದಿನಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9591100445 ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com