ಕಾಂಗ್ರೆಸ್ ಗೆ ಮರಳಿ ಬಂದ ಸುಧಾಕರ್

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದ ಚಿಂತಾಮಣಿಯ ಮಾಜಿ ಶಾಸಕ ಎಂಸಿ ಸುಧಾಕರ ಮರಳಿ ಪಕ್ಷಕ್ಕೆ ಬಂದಿದ್ದಾರೆ.
ಎಂಸಿ ಸುಧಾಕರ್ (ಸಂಗ್ರಹ ಚಿತ್ರ)
ಎಂಸಿ ಸುಧಾಕರ್ (ಸಂಗ್ರಹ ಚಿತ್ರ)

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ವಿಚಾರದಿಂದ ಬೇಸತ್ತು ಕಾಂಗ್ರೆಸ್ ತೊರೆದಿದ್ದ ಚಿಂತಾಮಣಿಯ ಮಾಜಿ ಶಾಸಕ ಎಂಸಿ ಸುಧಾಕರ ಮರಳಿ ಪಕ್ಷಕ್ಕೆ ಬಂದಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಸುಧಾಕರ ಕಳೆದ ಬಾರಿ ಪಕ್ಷ ಬಿಡಲು ಕಾರಣರಾಗಿದ್ದ ಮಾಜಿ ಸಚಿವ ಕೆಹೆಚ್ ಮುನಿಯಪ್ಪ, ಸಚಿವ ಡಿ.ಕೆ ಶಿವಕುಮಾರ್, ಪಕ್ಷದ ಮುಖಂಡರಾದ ವಿ ಮುನಿಯಪ್ಪ ಹಾಗೂ ವಾಣಿಕೃಷ್ಣ ರೆಡ್ಡಿ ಹಾಜರಿದ್ದರು. ಸುಧಾಕರ ಅವರು ಬೇಷರತ್ತಾಗಿ ಕಾಂಗ್ರೆಸ್ ಸೇರಿದ್ದಾರೆ ಎಂಬ ಸಮಜಾಯಿಷಿ ಮೇಲ್ನೋಟಕ್ಕೆ ಕಂಡುಬಂದರೂ ಹಲವು ಬೇಡಿಕೆಗಳನ್ನು ಪಕ್ಷದ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಜಿಪಂ ತಾಪಂ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ವತಂತ್ರ ನಡೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ನೀಡಬೇಕು ಹಾಗೂ ತಮ್ಮ ನಿರ್ಧಾರಗಳಲ್ಲಿ ಕೆಹೆಚ್ ಮುನಿಯಪ್ಪ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂಬ ಸಹ್ರತ್ತುಗಳನ್ನು ಒಡ್ಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com