ಪ್ರಯಾಣಿಕರ ನೆರವಿಗೆ ಬರಲಿದೆ ಸಂಚಾರಿ ದಳ

ನಗರದೊಳಕ್ಕೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಪ್ರವೇಶ ನಿರ್ಬಂಧ ಸೋಮವಾರದಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದೊಳಕ್ಕೆ ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ಪ್ರವೇಶ ನಿರ್ಬಂಧ ಸೋಮವಾರದಿಂದಲೇ ಅಧಿಕೃತವಾಗಿ ಜಾರಿಗೆ ಬಂದಿದೆ.

ಖಾಸಗಿ ಬಸ್ ಪ್ರಯಾಣಿಕರ ಪಾಲಿಗೆ ನಗರದ ಆರಂಭ ಮತ್ತು ಅಂತ್ಯ ಇನ್ನೂ ನಾಲ್ಕು ದಿನಗಳ ಕಾಲ ಹೊರ ವಲಯದಿಂದಲೇ ನಡೆಯಲಿದೆ. ಇದಕ್ಕೆ ಸಾರಿಗೆ ಇಲಾಖೆ ಸಿದ್ಧತೆ ನಡೆಸಿದ್ದು, ಪ್ರಯಾಣಿಕರು ಕೂಡ ಸಿದ್ಧವಾಗಬೇಕಿದೆ. ದೂರದೂರುಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ತೊಂದರೆ ಆಗದಂತೆ ಖಾಸಗಿ ಬಸ್ಸುಗಳು ನಿಲ್ಲುವ ನಗರದ ಹೊರವಲಯದ ಆರು ಕಡೆಗಳಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಚಾರಿ ದಳ (ಮೊಬೈಲ್ ಸ್ಕ್ವಾಡ್) ಸೇರಿದಂತೆ ಭದ್ರತೆಗಾಗಿ ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಿದ್ದು, ಈ ಆರೂ ಕಡೆಗಳಿಂದ ಕ್ಷಣ ಕ್ಷಣಕ್ಕೂ ಮೆಜೆಸ್ಟಿಕ್ ಮತ್ತಿತರ ಕಡೆಗೆ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳು ಸಂಚರಿಸಲಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ವೆಸ್ಟ್ ಕರ್ನಾಟಕ ಸಮಾವೇಶದ ಹಿನ್ನೆಲೆಯಲ್ಲಿ ನಗರದೊಳಗೆ ಖಾಸಗಿ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಗಳು ಹಾಗೂ ಆಲ್ ಇಂಡಿಯಾಪರ್ಮಿಟ್ ಬಸ್ ಗಳ ಪ್ರವೇಶವನ್ನು ಇಂದಿನಿಂದ ಫೆ.5 ರವರೆಗೆ ಬೆಳಗ್ಗೆ 7ರಿಂದ ರಾತ್ರಿ 10 ರವರೆಗೆ ನಿಷೇಧಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳು ನಿಲ್ಲುವ ನಗರದ ಹೊರವಲಯದ ಸ್ಥಳಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com