ಬಾಗಲಕೋಟೆ: ವಿದ್ಯಾರ್ಥಿಗಳು ತಂದೆ, ತಾಯಿ ಮತ್ತು ಗುರುಗಳನ್ನು ಗೌರವಿಸುವ ಮೂಲಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕೆಂದು ಸಾಹಿತಿ ಡಾ.ಪ್ರಕಾಶ ಖಾಡೆ ಕರೆ ನೀಡಿದರು. ನಗರದ ವಿದ್ಯಾ ಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದದಲ್ಲಿ ಮಾತನಾಡಿದ ಅವರು, ಹಿರಿಯರು ಹೇಳಿದಂತೆ ವಿದ್ಯಾರ್ಥಿಗಳು ಜೀವನದಲ್ಲಿ ಪ್ರಯತ್ನ, ಧ್ಯಾನ, ನಿದ್ರೆ ಹಾಗೂ ಮಿತ ಆಹಾರ ರೂಢಿಸಿಕೊಳ್ಳುವ ಮೂಲಕ ಕ್ರಿಯಾಶೀಲ, ಆರೋಗ್ಯ ಪೂರ್ಣ ಹಾಗೂ ಯಶಸ್ವಿ ಬದುಕನ್ನು ತಮ್ಮದಾಗಿಸಿಕೊಳ್ಳಬೇಕೆಂದು ಹೇಳಿದರು. ವಿಶ್ರಾಂತ ಅಧ್ಯಾಪಕ ಆರ್.ವಿ.ಬುರ್ಲಿ, ಸಿ.ಎನ್.ದಾಸ ಅಧ್ಯಕ್ಷತೆ ವಹಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಿದರು. ವೈ.ಎಂ. ಮೊಹರೆ, ಉಮೇಶ ತಿಮ್ಮಾಪುರ, ಜಿ. ಕುಲಕರ್ಣಿ, ಎಸ್. ಗುರುರಾಜ, ಸಂಜನಾ ದೇಶಪಾಂಡೆ, ಎಸ್.ಎಂ. ಇನಾಮದಾರ, ಎಚ್. ಲಮಾಣಿ ಮತ್ತಿತರರು ಇದ್ದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.