ಬಾದಾಮಿ: ತಾಲೂಕಿನ ನಂದಿಕೇಶ್ವರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸುವ ಮೂಲಕ ರಾಷ್ಟ್ರೀಯ ಮತದಾರ ದಿನಾಚರಣೆ ಆಚರಿಸಲಾಯಿತು.
ಗ್ರಾಪಂ ಅಧ್ಯಕ್ಷ ಎಂ.ಜಿ. ಅಳಗುಂಡಿ ಮಾತನಾಡಿ, ಮತದಾನ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷ ಎಫ್.ಎಂ ಹರದೊಳ್ಳಿ ಮಾತನಾಡಿ, ಯುವ ಮತದಾರರು ತಾವು ಮಾಡುವ ಮತದಾನ ದೇಶದ ಭವಿಷ್ಯದ ದೃಷ್ಟಿಯಿಂದ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು. ಮುಖ್ಯೋಪಾಧ್ಯಾಯ ಎಸ್.ಎ. ಕಾಂಬಳೆ ಮಾತನಾಡಿ, ಮತದಾನದ ಜೊತೆಗೆ ಗುರುತಿನ ಚೀಟಿ ಇನ್ನಿತರ ಸರಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕ ಡಿ.ವೈ. ಗಚ್ಚನ್ನವರ ಪ್ರಮಾಣ ವಚನ ಬೋಧಿಸಿದರು. ಐ.ಡಿ. ಕಾಖಂಡಕಿ ಸ್ವಾಗತಿಸಿದರು, ಎಸ್.ಎಂ. ಭಂಡಾರಿ ನಿರೂಪಿಸಿದರು. ಎನ್.ವೈ. ಗೊರವರ ವಂದಿಸಿದರು. ಗ್ರಾಮದ ನಾಲ್ಕು ಬೂತ್ಗಳ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.