ರಬಕವಿ: ರಬಕವಿ-ಬನಹಟ್ಟಿ ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಛತ್ರಪತಿ ಶಿವಾಜಿ ಮಹಾರಾಜರ 355ನೇ ಜನ್ಮ ದಿನ ಆಚರಿಸಲಾಯಿತು.
ನಗರದ ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ಕೆಎಚ್ಡಿಸಿ ಕಾಲೋನಿ ಬಳಿಯ ಅಂಬಾಭವಾನಿ ದೇವಾಲಯದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಆರ್.ಎಂ. ಕೊಡಗೆ, ಕಾರ್ಯ ನಿರ್ವಾಹಕ ಅಭಿಯಂತರ ಭಾವುಸಾಹೇಬ ಸುರಕೋಡ, ಸಿದ್ಧು ಮಾತಾಳಿ, ಮಲ್ಲಿಕಾರ್ಜುನ ಪಾಟೀಲ, ವ್ಯವಸ್ಥಾಪಕ ಶಿವಾನಂದ ಅಂಬಿಗೇರ, ಆರೋಗ್ಯ ನಿರೀಕ್ಷಕ ಸಂತೋಷ ಬೆಳ್ಳಿಕಟ್ಟಿ, ವಿಜಯ ಮಾನೆ, ವಿಠಲ ಕದಮ್, ಸುರೇಶ ಗಾಯಕವಾಡ, ಪಾಂಡುರಂಗ ಸಾಲ್ಗುಡೆ, ನಂದು ಗಾಯಕವಾಡ, ಬಾಳು ಕದಮ್, ಶ್ರೀಕಾಂತ ಗಾಯಕವಾಡ ಸೇರಿದಂತೆ ಮತ್ತಿತರರು ಪ್ರಮುಖರು ಉಪಸ್ಥಿತರಿದ್ದರು.