ಗುಳೇದಗುಡ್ಡ: ಪಟ್ಟಣದ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಶುಕ್ರವಾರ ಸಡಗರ ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.
ಬೆಳಗ್ಗೆ 8 ಗಂಟೆಗೆ ಹುಸೇನ್ ಪೇಟೆಯಿಂದ ಆರಂಭವಾದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಡಿ ಮಸೀದಿಯ ಹತ್ತಿರ ಎಲ್ಲ ಮುಸ್ಲಿಂ ಬಾಂಧವರು ಸೇರಿ ಪರಸ್ಪರ ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು.
ಹಿಸೇನ್ಪೇಟ್ ಮಸೀದಿಯ ಚೇರಮನ್ ನಬಿಸಾಬ ಮಜಾಹಿದ್, ಬಡಿ ಮಸೀದಿಯ ಚೇರಮನ್ ಎಂ.ಎಂ. ಮಕಾನದಾರ, ಜುಮ್ಮಾ ಮಸೀದಿಯ ಬಂದೇನವಾಜ ಕಮಾನಗರ್, ಯಾಸೀನ್ ಮಸೀದಿಯ ಕೆ.ಆರ್. ರಾಯಚೂರ, ಆಮ್ಜುಮಾತ್ ಚೇರಮನ್ ರಫೀಕ್ ಅಹಮ್ಮದ್ ಕಲ್ಬುರ್ಗಿ ಸೇರಿದಂತೆ ಮುಖಂಡರಾದ ಜಮೀರ್ ಮೌಲ್ವಿ, ರಜಾಕ್, ಇಬ್ರಾಹಿಮ್, ಮುಬಾರಕ ಮಂಗಳೂರ, ಆಯ್.ಎಂ. ಬ್ಯಾಳಿ, ಅಪಘಾನ್ ಸೇರಿದಂತೆ ಇನ್ನೂ ಅನೇಕ ಮುಖಂಡರು ಹಾಗೂ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.