ರೈಲು-ಕಾರು ಡಿಕ್ಕಿ

Updated on

ಬಾಗಲಕೋಟೆ: ತಾಲೂಕಿನ ಜಡ್ರಾಮಕುಂಟೆ ಬಳಿ ಮಂಗಳವಾರ ಸಂಜೆ 4.30ರ ವೇಳೆಗೆ ಚಲಿಸುತ್ತಿದ್ದ ರೈಲಿಗೆ ಕಾರು ಡಿಕ್ಕಿ ಹೊಡೆದು ಇಬ್ಬರಿಗೆ ಗಾಯಗಳಾಗಿವೆ. ತಳಗಿಹಾಳ ಗ್ರಾಮದ ಸಂಗನಗೌಡ ಚೌಧರಿ ಹಾಗೂ ಸಿರಗುಪ್ಪಿಯ ಮುತ್ತುರಾಜ ರೊಳ್ಳಿ ಗಾಯಗೊಂಡಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಳುಬಾಳದಿಂದ ಜಡ್ರಾಮಕುಂಟಿ ಗ್ರಾಮಕ್ಕೆ ಇಂಡಿಕಾ ಕಾರಿನಲ್ಲಿ ಅವರು ತೆರಳುತ್ತಿದ್ದರು. ಮಾರ್ಗದ ಮಧ್ಯೆ ಇರುವ ಮಾನವ ರಹಿತ ಲೆವಲ್ ಕ್ರಾಸ್ ಬಳಿ ಹಳಿ ದಾಟಲು ಮುಂದಾದಾಗ ಈ ಅವಘಡ ಸಂಭವಿಸಿದೆ. ಸೊಲ್ಲಾಪುರ ಗದಗ ಪ್ಯಾಸೆಂಜರ್ ರೈಲಿನ ಇಂಜಿನ್ ಕಾರಿನ ಮುಂಭಾಗಕ್ಕೆ ಬಡಿದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com