ಎಸ್ಸೆಸ್ಸೆಲ್ಸಿ ಪರೀಕ್ಷೆ: ಚಹಾ ಮಾರುವವನ ಮಗಳ ಸಾಧನೆ

Updated on: 

ರಬಕವಿ: ಟೀ ಮಾರಾಟದಿಂದ ಜೀವನ ಬಂಡೆ ಸಾಗಿಸುವ ಬನಹಟ್ಟಿಯ ಸೋಮವಾರ ಪೇಟೆಯ ನಿವಾಸಿ ಭೀಮಶಿ ಬೆಳಗಲಿ ಅವರ ಪುತ್ರಿ ಪಾರ್ವತಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 93 ರಷ್ಟು ಅಂಕ ಪಡೆದಿದ್ದಾಳೆ.
ಪಾರ್ವತಿ ಎಸ್.ಆರ್.ಏ ಹೈಸ್ಕೂಲಿನ ವಿದ್ಯಾರ್ಥಿನಿಯಾಗಿದ್ದಾಳೆ. ವಿದ್ಯೆ ಎಂಬುದು ಎಷ್ಟು ಹಣ ಸುರಿದರೂ ಬಾರದು ಎಂಬುದಕ್ಕೆ ಸಿರಿವಂತರ ಮಕ್ಕಳು ಸಾಕ್ಷಿಯಾಗಿದ್ದರೆ, ಕಿತ್ತು ತಿನ್ನುವ ಬಡತನದಲ್ಲೂ ಪ್ರತಿಭೆ ಇದ್ದರೆ ಯಾರಾದರೂ ಸಾಧನೆ ಮಾಡಬಲ್ಲರು ಎಂಬುದಕ್ಕೆ ಪಾರ್ವತಿ ಸಾಧನೆ ಸಾಕ್ಷಿ.
ಕನ್ನಡ123, ಹಿಂದಿಯಲ್ಲಿ 95, ಗಣಿತದಲ್ಲಿ 94, ಸಮಾಜದಲ್ಲಿ 94, ಇಂಗ್ಲಿಷ್‌ನಲ್ಲಿ 87 ಮತ್ತು ವಿಜ್ಞಾನದಲ್ಲಿ 88 ಅಂಕಗಳನ್ನು ಪಡೆದಿದ್ದಾಳೆ.
ಶಾಲಾ ಸಮಯದ ಹೊರತಾಗಿ 2 ರಿಂದ 3 ಗಂಟೆ ಟೀ ಅಂಗಡಿಯಲ್ಲಿ ಕೆಲಸ ಮಾಡಿ ತಂದೆಗೆ ಒಂದಿಷ್ಟು ವಿಶ್ರಾಂತಿ ನೀಡುತ್ತಾಳೆ. ಪಾರ್ವತಿಗೆ ವಿಜ್ಞಾನ ಓದಬೇಕೆಂಬ ಆಸೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com