ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿದ್ಯಾರ್ಥಿಗಳ ಸಾಧನೆ

Updated on

ಜಮಖಂಡಿ: ತಾಲೂಕಿನ ಸಿದ್ದಾಪೂರದ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪುಷ್ಪಾತಾಯಿ ಕನ್ನಡ ಮಾಧ್ಯಮ ಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.100 ರಷ್ಟು ಆಗಿದೆ.
ಲಕ್ಷ್ಮೀ ಗಿರಗಾಂವಿ ಶೇ.93.6 ಪ್ರಥಮ, ಲಕ್ಷ್ಮೀ ಜವಳಗಿ ಶೇ.87.81 ದ್ವಿತೀಯ, ಮಾಧುರಿ ಅರಕೇರಿ ಶೇ.84.64 ಅಂಕ ಪಡೆದು ತೃತೀಯ ಶ್ರೇಣೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸಂಸ್ಥೆಯ ಚೇರಮನ್ ಜಗದೀಶ ಗುಡಗುಂಟಿ, ಆಡಳಿತಾಧಿಕಾರಿ ಸಿ.ಎಸ್. ಝಳಕಿ, ಮುಖ್ಯಗುರುಗಳಾದ ಕೆ.ಬಿ.ಪಾಟೀಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಟಿ ಕೆಕೆ ತುಂಗಳ ಶಾಲೆ: ಕೆ. ಕಿ. ತುಂಗಳ ಕನ್ನಡ-ಆಂಗ್ಲ ಮಾಧ್ಯಮ ಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇಕಡಾ 100 ರಷ್ಟಾಗಿದೆ. ಸ್ಮೀತಾ ಗಂಗಾಧರ ಹೋಳಿಕಟ್ಟಿ ಸಮಾಜ ವಿಜ್ಞಾನ ವಿಷಯದಲ್ಲಿ 100 ಕ್ಕೆ 100 ಅಂಕ ಪಡೆದು ಶೇ 92.64 ಅಂಕ ಗಳಿಸಿದ್ದಾಳೆ. ಕನ್ನಡ ಮಾಧ್ಯಮದಲ್ಲಿ ರೋಹನ್ ಘಾಟಗೆ ಶೇ. 97.76 ಅಂಕ ಪಡೆದು ಪ್ರಥಮ ಸ್ಥಾನ, ಜೀವನ ಮೋಗ್ಲಿ, ರಮೇಶ ಚೆನ್ನಪ್ಪನವರ 609 ಅಂಕ ಪಡೆದು ದ್ವಿತೀಯ ಸ್ಥಾನ, ಅಭಿಷೇಕ ಜಕನೂರ 607 ಅಂಕ ಗಿಟ್ಟಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಮೃತಾ ಹಿರೇಮಠ 601 ಅಂಕದೊಂದಿಗೆ ಪ್ರಥಮ, ಶಶಿಧರ ಹಂಪನ್ನವರ 599 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸಂಸ್ಥೆಯ ಚೇರಮನ್ ಅಶೋಕ ತುಂಗಳ, ಡಾ. ಲಕ್ಷ್ಮೀ ತುಂಗಳ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಟಿ ಸ್ವಾಮಿ ವಿವೇಕಾನಂದ ಶಾಲೆ: ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಶ್ರಯದಲ್ಲಿ ನಡೆಯುವ ಸ್ವಾಮಿ ವಿವೇಕಾನಂದ ಆಂಗ್ಲ-ಕನ್ನಡ ಮಾಧ್ಯಮ ಪ್ರೌಢಶಾಲೆಯ ಪ್ರಾಜಕ್ತಾ ಬಡಚಿಕರ ಶೇ.93.12 ಅಂಕ ಪಡೆದು ಪ್ರಥಮ ಸ್ಥಾನ, ವೇದಾಂತ ಕಲಾನಿ ಶೇ. 85.12 ದ್ವಿತೀಯ, ಲಕ್ಷ್ಮೀ ಹಣಮಶೆಟ್ಟಿ ಮತ್ತು ಅಮ್ರತಾ ಮಾಚಾಣಿ ಶೇ. 84.48 ತೃತೀಯ ಮತ್ತು ಕನ್ನಡ ಮಾಧ್ಯಮದಲ್ಲಿ ಶೃತಿ ಪರಮಟ್ಟಿ ಶೇ. 95.52 ಪ್ರಥಮ, ವೀಣಾ ಬಾಡಗಿ ಶೇ.93.12 ದ್ವಿತೀಯ,ನಿವೇದಿತಾ ಪರಸಪ್ಪಗೋಳ ಶೇ.90.56 ಅಂಕ ಪಡೆದು ಪಾಸಾಗಿದ್ದಾರೆ.
ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊರಾರ್ಜ ದೇಸಾಯಿ ವಸತಿ ಶಾಲೆ ಶೇ.100 ರಷ್ಟು ಫಲಿತಾಂಶ ಪಡೆದಿದೆ. ಲಕ್ಷ್ಮೀ ಜಮಖಂಡಿ ಶೇ.98.08 ಅಂಕ ಪಡೆದು ರಾಜ್ಯಕ್ಕೆ 4 ನೇ ಸ್ಥಾನ, ಪ್ರವೀಣ ಜಾಲಿಬೇಲಿ ಶೇ. 96.32 ದ್ವಿತೀಯ, ಶ್ರೀಧರ ಖೇಗೋಜಿ ಶೇ.91.84 ತ್ರತೀಯ ಸ್ಥಾನ ಪಡೆದುಕೊಂಡಿದ್ದಕ್ಕೆ ಪ್ರಾಚಾರ್ಯ ಜೆ.ಬೆಸ್ತರ ಅಭಿನಂದಿಸಿದ್ದಾರೆ.
ಗಂಗೂತಾಯಿ ಲೇಲೆ ಹೈಸ್ಕೊಲ್: ಗಂಗೂತಾಯಿ ಲೇಲೆ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.92 ರಷ್ಟು ಫಲಿತಾಂಶ ಪಡೆದಿದೆ.
ರವಿ ಮೇಂಡಿಗೇರಿ ಶೇ.92.48 ಪ್ರಥಮ, ಸಭಾ ಮೇಸ್ತ್ರೀ ಶೇ.91.04 ದ್ವಿತೀಯ, ಪೂನಂ ಮೋಟೆ ಶೇ.88.96 ತೃತೀಯ ಸ್ಥಾನ ಪಡೆದು ಪಾಸಾಗಿದ್ದಾರೆ.
ಟಕ್ಕಳಕಿ ಹೈಸ್ಕೂಲ್: ಟಕ್ಕಳಕಿ ಗ್ರಾಮದ ಸರ್ಕಾರಿ ಹೈಸ್ಕೂಲ್ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 94 ರಷ್ಟು ಫಲಿತಾಂಶ ಪಡೆದಿದೆ. ಚೆನ್ನಬಸವ ಅಲ್ಲವ್ವಗೋಳ ಶೇ.91.84 ಪ್ರಥಮ, ಮಲ್ಲಿಕಾರ್ಜುನ ಐನಾಪೂರ ಶೇ. 89.76 ದ್ವಿತೀಯ, ಲಕ್ಷ್ಮೀಕಾಂತ ಕರ್ಲಟ್ಟಿ ಶೇ.89.28 ಅಂಕ ಪಡೆದು ತೃತೀಯ ಸ್ಥಾನಗ ಪಡೆದಿದ್ದಾರೆ.
ಮುಧೋಳ: ಮುಧೋಳದ ಸ್ಯಾಮ್ಯುಯಲ್ ಮೇಮೋರಿಯಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 100ಕ್ಕೆ 100 ರಷ್ಟು ಫಲಿತಾಂಶ ಬಂದಿದೆ.  28 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 7 ಉನ್ನತ ಶ್ರೇಣಿಯಲ್ಲಿ, 13 ಪ್ರಥಮ, 6 ದ್ವಿತೀಯ, 2 ತೃತೀಯ ಸ್ಥಾನದಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷೆ ಮಾರ್ಗೆಟ್ ಗೌಡರ ತಿಳಿಸಿದ್ದಾರೆ. ರಶ್ಮಿ ಸೋಮಣ್ಣವರ ಶೇ.95, ಬಸವರಾಜ ಸೋನಾರ ಶೇ.92, ಶ್ರೀನಿವಾಸ ಕುರಿ ಶೇ.91, ರಕ್ಷಾ ಪಾಟೀಲ ಶೇ.89.12, ಪುನೀತ ಗಾಳಿ ಶೇ.87, ಸುಪ್ರಿತಾ ಪಾಟೀಲ ಶೇ.84.48, ಸವಿತಾ ಕುಂದರಗಿ ಶೇ.84.16 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com