ವರ್ಗಾವಣೆಯಲ್ಲಿ ಮಾರ್ಪಾಡು

Updated on: 

ಕ.ಪ್ರ.ವಾರ್ತೆ ಬೆಂಗಳೂರು ಆ.1
ಐಪಿಎಸ್ ಅಧಿಕಾರಿಗಳ ವರ್ಗಾವಣೆ ಸಂಬಂಧ ರಾಜ್ಯ ಸರ್ಕಾರ ಗುರುವಾರ ಹೊರಡಿಸಿದ್ದ ಆದೇಶದಲ್ಲಿ ಮಾರ್ಪಾಟು ಮಾಡಿದ್ದು, ಕೆಲವು ಅಧಿಕಾರಿಗಳ ವಗಾವಣೆಯನ್ನು ರದ್ದುಗೊಳಿಸಿದೆ. ಜತೆಗೆ ನಾಲ್ಕು ಅಧಿಕಾರಿಗಳನ್ನು ವರ್ಗಾಯಿಸಿ ಶುಕ್ರವಾರ ಹೊಸ ಆದೇಶ ಹೊರಡಿಸಿದೆ.
ಅಪರಾಧ ಮತ್ತು ತಾಂತ್ರಿಕ ಸೇವೆಗಳ ಎಡಿಜಿಪಿ ಎನ್.ಎಸ್. ಮೆಘರಿಕ್ ಅವರಿಗೆ ಸಂಪರ್ಕ, ಆಧುನಿಕರಣದ ಎಡಿಜಿಪಿ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆಂತರಿಕ ಭದ್ರತೆ ವಿಭಾಗದ (ಎಟಿಸಿ) ಐಜಿಪಿ ಸಿ.ಎಚ್. ಪ್ರತಾಪ್ ರೆಡ್ಡಿ ಅವರಿಗೆ ಬೆಂಗಳೂರು ಅರಣ್ಯ ಘಟಕದ ಐಜಿಪಿ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಗಿದೆ.
ತರಬೇತಿ ಡಿಐಜಿಯಾಗಿ ವರ್ಗಾಯಿಸಿದ್ದ ಕೆ.ವಿ. ಶರತ್‌ಚಂದ್ರ ಅವರ ವರ್ಗಾವಣೆ ರದ್ದುಗೊಳಿಸಿ, ಬೆಂಗಳೂರು ನಗರದ ಪೂರ್ವ ವಿಭಾಗದ ಜಂಟಿ ಆಯುಕ್ತ ಹಾಗೂ ಡಿಐಜಿ ಹುದ್ದೆಯಲ್ಲೇ ಮುಂದುವರಿಸಲಾಗಿದೆ.
ಗುಲ್ಬರ್ಗ ತರಬೇತಿಯ ಪ್ರಾಂಶುಪಾಲ ಹುದ್ದೆಗೆ ವರ್ಗಾಯಿಸಲಾಗಿದ್ದ ಬಿ. ಶಿವಕುಮಾರ್ ಆದೇಶ ರದ್ದು ಮಾಡಿ, ಅವರನ್ನು ಬೆಂಗಳೂರು ತರಬೇತಿಯ ಡಿಐಜಿಯಾಗಿ ಮುಂದುವರಿಸಲಾಗಿದೆ.
ಬೆಂಗಳೂರು ಆಡಳಿತದ ಡಿಸಿಪಿ ಹುದ್ದೆಗೆ ವರ್ಗಾಯಿಸಲಾಗಿದ್ದ ಆದೇಶ ರದ್ದುಗೊಳಿಸಿ ಸೋನಿಯಾ ನಾರಂಗ್ ಅವರನ್ನು ಕೆಎಸ್‌ಆರ್‌ಪಿಯ 1-ಬೆಟಾಲಿಯನ್ ಕಮಾಂಡೆಂಟ್ ಆಗಿಯೇ ಮುಂದುವರಿಸಿಲಾಗಿದೆ. ಚಿತ್ರದುರ್ಗ ಎಸ್ಪಿಯಾಗಿ ವರ್ಗಗೊಂಡಿದ್ದ ಡಿ. ಪ್ರಕಾಶ್ ಅವರನ್ನು ಬೀದರ್ ಎಸ್ಪಿಯಾಗಿ ವರ್ಗಾಯಿಸಲಾಗಿದೆ. ಬಿಜಾಪುರ ಎಸ್ಪಿಯಾಗಿ ವರ್ಗಾವಣೆಯಾಗಿದ್ದ ಬಿ.ಆರ್. ರವಿಕಾಂತೇಗೌಡ ಅವರ ವರ್ಗಾವಣೆ ರದ್ದುಗೊಳಿಸಲಾಗಿದೆ. ಆದರೆ ಯಾವುದೇ ಹುದ್ದೆ ನೀಡಿಲ್ಲ.
ಡಾ. ರಾಮ್ ನಿವಾಸ್- ಬೆಂಗಳೂರು ನಗರ ಆಡಳಿತ ಡಿಸಿಪಿ, ಎಂ.ಎನ್. ಅನುಚೇತ್- ಎಸ್ಪಿ ಚಿತ್ರದುರ್ಗ, ಸಿ.ಎಚ್. ಸುಧೀರ್‌ಕುಮಾರ್ ರೆಡ್ಡಿ- ಎಸ್ಪಿ ಬಿಜಾಪುರ, ವರ್ತಿಕಾ ಕಾತಿಯಾರ್- ಎಸ್ಪಿ ಕೊಡಗು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com