ಬೆಂಗಳೂರು: ಗೃಹ ಸಚಿವ ಕೆ.ಜೆ.ಜಾರ್ಜ್ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಕಾಂ ಪಚಾವೋ ಸ್ಥಾನ ಪಲ್ಲಟವಾಗಿತ್ತು.
ಸಾಮಾನ್ಯವಾಗಿ ಗೃಹ ಸಚಿವರು ಅಧಿಕಾರಿಗಳ ಜತೆ ಪತ್ರಿಕಾಗೋಷ್ಠಿ ನಡೆಸುವಾಗ ಅವರ ಬಲಭಾಗದಲ್ಲಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಎಡ ಭಾಗದಲ್ಲಿ ಕಾನೂನು ಸುವ್ಯವಸ್ಥೆ ಎಡಿಜಿಪಿ, ಡಿಜಿಪಿ ಪಕ್ಕದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಆಸನ ನೀಡಲಾಗುತ್ತದೆ.
ಆದರೆ ಇಂದು ಗೃಹ ಸಚಿವರ ಬಲಭಾಗದಲ್ಲಿ ಅವರ ಸಲಹೆಗಾರ ಕೆಂಪಯ್ಯ, ಅವರ ಪಕ್ಕದಲ್ಲಿ ಕಾನೂನು-ಸುವ್ಯವಸ್ಥೆ ಎಡಿಜಿಪಿ ಕಿಶೋರ್ ಚಂದ್ರ, ಅವರ ಪಕ್ಕದಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಪ್ರವೀಣ್ ಸೂದ್ ಹಾಗೂ ಅಪರಾಧ ವಿಭಾಗದ ಎಡಿಜಿಪಿ ಮೇಘರೀಕ್ ಕುಳಿತಿದ್ದರು. ಗೃಹ ಸಚಿವರ ಎಡಭಾಗದ ಮೊದಲ ಸ್ಥಾನದಲ್ಲಿ ಗೃಹ ಇಲಾಖೆ ಕಾರ್ಯದರ್ಶಿ ಪಟ್ಟನಾಯಕ್ ಕುಳಿತಿದ್ದರೆ, ಅವರ ಪಕ್ಕದ ಸ್ಥಾನ ಡಿಜಿಪಿ ಪಚಾವೋ ಅವರದ್ದಾಗಿತ್ತು. ನಂತರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.