ಹೆಗ್ಗೋಡಲ್ಲಿ ಸಾಂಸ್ಕೃತಿಕ ಶಿಬಿರ

Updated on: 

ಬೆಂಗಳೂರು: ಹೆಗ್ಗೋಡಿನ ನೀನಾಸಂನಲ್ಲಿ ಸಾಂಸ್ಕೃತಿಕ ಅನುಸಂಧಾನ ಶಿಬಿರ ಅಕ್ಟೋಬರ್ 2ರಿಂದ 8ರವರೆಗೆ ನಡೆಯಲಿದೆ. ಕಳೆದ ಎರಡು ದಶಕಗಳಿಂದ ನೀನಾಸಂ ಚಲನಚಿತ್ರ-ಸಾಂಸ್ಕೃತಿಕ ಶಿಬಿರಗಳನ್ನು ಪ್ರತಿ ಅಕ್ಟೋಬರ್‌ನಲ್ಲಿ ನಡೆಸುತ್ತಾ ಬಂದಿದೆ. ಈ ಶಿಬಿರದಲ್ಲಿ ರಂಗಭೂಮಿ, ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ ಹಾಗೂ ಒಟ್ಟು ಸಮಾಜದೊಂದಿಗೆ ಸಂಸ್ಕೃತಿಯ ಸಂಬಂಧ ವಿಷಯಗಳ ಬಗ್ಗೆ ರಾಜ್ಯ ಹಾಗೂ ಹೊರನಾಡುಗಳಿಂದ ಬರುವ ಅನೇಕ ಗಣ್ಯರು ಉಪನ್ಯಾಸ, ಚರ್ಚೆ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಪ್ರತಿ ಸಂಜೆ  ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಊಟ, ತಿಂಡಿ, ತಂಗಲು ಸ್ಥಳ ಎಲ್ಲವೂ ಸೇರಿ 3ಸಾವಿರ ಶುಲ್ಕವಿರುತ್ತದೆ. ವಿದ್ಯಾರ್ಥಿಗಳಿಗೆ 2500 ಶುಲ್ಕ. ಶಿಕ್ಷಕರು, ವಿದ್ಯಾರ್ಥಿಗಳು, ಪತ್ರಕರ್ತರು ಹಾಗೂ ಗ್ರಾಮೀಣ ಪ್ರದೇಶದ ಆಸಕ್ತರಿಗೆ ಶಿಬಿರದಲ್ಲಿ ವಿಶೇಷ ಆದ್ಯತೆಯಿರುತ್ತದೆ. ಭಾಗವಹಿಸಲು ಇಚ್ಛಿಸುವವರು ಅರ್ಜಿಯನ್ನು www.ninasam.org ಇಲ್ಲಿಂದ ಡೌನ್‌ಲೋಡ್ ಮಾಡಿ ನೀನಾಸಂ ಸಾಂಸ್ಕೃತಿಕ ಶಿಬಿರ, ಹೆಗ್ಗೋಡು, ಸಾಗರ, ಕರ್ನಾಟಕ 577417ಕ್ಕೆ ಸೆಪ್ಟೆಂಬರ್ 20ರೊಳಗಾಗಿ ಕಳುಹಿಸಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com