8ರಿಂದ ಮೂರು ದಿನ ಅಂಚೆ ಚೀಟಿ ಪ್ರದರ್ಶನ

Updated on: 



ಬೆಳಗಾವಿ: ನಗರದ ಮಹಾವೀರ ಭವನದಲ್ಲಿ ಫೆ.8 ರಿಂದ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನದಲ್ಲಿ ಶೂರ ಸಂಗೊಳ್ಳಿ ರಾಂುಣ್ಣ ಮತ್ತು ಬೆಳಗಾವಿ ಕೋಟೆ ಚಿತ್ರವುಳ್ಳ ಲಕೋಟೆಂುನ್ನು ಬಿಡುಗಡೆಗೊಳಿಸಲಾಗುವುದು ಎಂದು ಅಂಚೆ ಇಲಾಖೆ ಅಧೀಕ್ಷಕ ಎಸ್.ಡಿ.ಕುಲಕರ್ಣಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಂುಲ್ಲಿ ಮಾತನಾಡಿದ ಅವರು, ಫೆ.8 ರಿಂದ ಮೂರು ದಿನಗಳ ಕಾಲ ನಡೆಂುಲಿರುವ ಈ ಜಿಲ್ಲಾ ಮಟ್ಟದ ಅಂಚೆ ಚೀಟಿ ಪ್ರದರ್ಶನದಲ್ಲಿ 1 ರಿಂದ 12 ತರಗತಿ ವರೆಗಿನ ಜಿಲ್ಲೆಂು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ಚಿತ್ರಕಲೆ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ನಗರದ ಶಹಾಪುರ ಸೀರೆಗಳಿಗೆ ದೇಶಾದ್ಯಂತ ಬೇಡಿಕೆಯಿದೆ. ಅದಕ್ಕಾಗಿ ಫೆ.9 ರಂದು ಶಹಾಪುರ ಸೀರೆಂು ಚಿತ್ರವಿರುವ ಲಕೋಟೆಂುನ್ನೂ ಕೂಡ ಬಿಡುಗಡೊಗೊಳಸಲಾಗುವುದು ಎಂದರು. ಕೊನೆಂು ದಿನವಾದ ಫೆ.10 ರಂದು ಶೂರ ಸಂಗೊಳ್ಳಿ ರಾಂುಣ್ಣನ ಭಾವಚಿತ್ರವಿರುವ ಲಕೋಟೆ ಬಿಡುಗಡೆ ಮಾಡಲಾಗುವುದು ಎಂದು ಎಸ್.ಡಿ. ಕುಲಕರ್ಣಿ ಹೇಳಿದರು. ಬೆಳಗಾವಿ ಕೋಟೆ, ಸಂಗೊಳ್ಳಿ ರಾಂುಣ್ಣ  ಹಾಗೂ ಶಹಾಪುರ ಸೀರೆಗಳ ಚಿತ್ರವುಳ್ಳ 3000 ಲಕೋಟೆ ಮುದ್ರಿಸಲಾಗಿದೆ. ಬೇಡಿಕೆಗೆ  ತಕ್ಕಂತೆ ಮುದ್ರಣ ಮಾಡಿಕೊಳ್ಳಲಾಗುವುದು. ಲಕೋಟೆಂು ಮೂಲಕ ಸಂಗೊಳ್ಳಿ ರಾಂುಣ್ಣನ ಕೀರ್ತಿ ಸಪ್ತಸಾಗರದಾಚೆಗೂ ಪಸರಿಸಲಿದೆ ಎಂದರು. ಸುದ್ದಿಗೋಷ್ಠಿಂುಲ್ಲಿ ಸಹಾಂುಕ ಅಧೀಕ್ಷಕ ಎಚ್.ಬಿ. ಹಸಬೆ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com