ಸುದ್ದಿ ಸಂಕ್ಷೇಪ

Updated on: 

ಸಮಾಜ ಸೇವಾರತ್ನ ಪ್ರಶಸ್ತಿ
ಬಾದಾಮಿ: ಇಲ್ಲಿನ ಉದ್ಯಮಿ, ಯುವ ನೇತಾರ ನಾಗರಾಜ ಕಾಚಟ್ಟಿ ಅವರು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಬೆಂಗಳೂರಿನ ನೃಪತುಂಗ ಕಲಾನಿಕೇತನ ಸಂಸ್ಥೆ ಕರ್ನಾಟಕ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿದೆ. ಫೆ.7ರಂದು ಬೆಂಗಳೂರಿನ ನಯನ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ  ಕಾಚಟ್ಟಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ಕಾಂಗ್ರೆಸ್ ಎಸ್ಸಿ-ಎಸ್ಟಿ ಸಮಾವೇಶಕ್ಕೆ ನಿರ್ಧಾರ
ರಬಕವಿ: ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಫೆ.8ರಂದು ರಬಕವಿಯ ಹೂಗಾರ ತೋಟದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಸಮಾವೇಶದ ನಿಮಿತ್ತ ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು, ಅರವಿಂದ ಮನ್ನಿಕೇರಿ, ತುಕಾರಾಮ ರೋಡಕರ, ಅಶೋಕ ಉಳ್ಳಾಗಡ್ಡಿ,ಅರ್ಜುನ ದೊಡಮನಿ, ರಾಮಣ್ಣಾ ಪಾತ್ರೋಟ, ಶಂಕರ ಸೋರಗಾಂವಿ, ಜಾವೇದ್ ಬಾಗವಾನ್, ರಾಜಶೇಕರ ಬಿದರಿ, ಈಶ್ವರ ಚಮಕೇರಿ ಸಮಿತಿಯಲ್ಲಿದ್ದಾರೆ. ಪಕ್ಷದ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಎನ್. ಮಂಜುನಾಥ, ಎಸ್ಟಿ ಘಟಕದ ಅಧ್ಯಕ್ಷ ಈಶ್ವರ, ಯುವ ಸಮಿತಿ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ, ವಿಪಕ್ಷ ನಾಯಕಿ ಮೋಟಮ್ಮ, ಶಾಸಕ ಸತೀಶ ಜಾರಕಿಹೊಳಿ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.
ಪ್ರತಿಭಾಕಾರಂಜಿ: ರಾಜ್ಯ ಮಟ್ಟಕ್ಕೆ ಆಯ್ಕೆ
ಮಹಾಲಿಂಗಪುರ: ಸಮೀಪದ ಮುಗಳಖೋಡ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕವ್ಹಾಲಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಚೆಗೆ ಮುಧೋಳದಲ್ಲಿ ಜರುಗಿದ ಬಾಗಲಕೋಟೆ ಜಿಲ್ಲಾಮಟ್ಟದ ಉರ್ದು ಭಾಷಾ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಎ.ಎಂ. ಮಡಿವಾಳರ ಅವರು ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ನೀಡಿ ಗೌರವಿಸಿದರು. ನ್ಯಾಯವಾದಿ ಐ.ಎಚ್. ಅಂಬಿ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಜಿ. ಮಿರ್ಜಿ, ಯುನಸ್ ಹುಲಕುಂದ, ಗೈಬುಸಾಬ ಮೋಮಿನ್, ಕೆ.ಬಿ. ಕುಡಚಿ, ಎನ್.ಎ. ಕಲಾದಗಿ, ಎಚ್.ಜಿ. ಮುಲ್ಲಾ, ಎಂ.ಎ. ಬ್ಯಾಕೋಡ, ಹುಸೇನ್ ಬಾದಶಾ ಲಾಡಖಾನ್, ಆರ್.ಎಸ್ ವಾಚ್‌ಮೇಕರ, ಪರಿನತಾಜ್, ಅನೀಲ ಕುಮಾರ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com