ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿಯ 110 ಗ್ರಾಮಸ್ಥರು ಕೆಎಲ್ಇ ವಿಶ್ವವಿದ್ಯಾಲಯದ ಬಿ.ಎಂ. ಕಂಕಣವಾಡಿ ಆಯುರ್ವೇದ ವೈದ್ಯಕಿಯ ಕಾಲೇಜಿಗೆ ದೇಹ ದಾನ ಮಾಡಲು ಮುಂದಾಗಿದ್ದು, ಇದೊಂದು ದಾಖಲೆಯೇ ಸರಿ. ಶೇಗುಣಸಿ ಗ್ರಾಮದ ರಾಷ್ಟ್ರೀಯ ಬಸವ ದಳದ ಮತ್ತು ಡಾ. ರಾಮಣ್ಣನವರ ಚಾರಟೇಬಲ್ ಟ್ರಸ್ಟ್ ಬೆಳಗಾವಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಪಾಲ್ಗೊಂಡ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ದೇಹ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿ, ಒಪ್ಪಿಗೆ ಪತ್ರ ನೀಡಿದ್ದಾರೆ.