ವಾಸ್ಕೋ: ಇಲ್ಲಿನ ಜುವಾರಿ ನಗರದ ನಫ್ತಾ ಪೈಪಲೈನ್ ಮೇಲೆ ಕಟ್ಟಲಾಗಿದ್ದ 5 ಗುಡಿಸಲುಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶುಕ್ರವಾರ ತೆರವುಗೊಳಿಸಿದೆ.
ಪ್ರಾಧಿಕಾರದ ಅಧಿಕಾರಿ ಸಿಪಿಒ ಪಾಲ್ತಾದೊ ಅವರ ನೇತೃತ್ವದಲ್ಲಿ ಈ ತೆರವು ಕಾಂರ್ಾಚರಣೆಂುನ್ನು ಕೈಗೊಳ್ಳಲಾಗಿದೆ. ಕಳೆದ ಹಲವು ದಿನಗಳಿಂದ ಇಲ್ಲಿನ ನಫ್ತಾ ಪೈಪಲೈನ್ ಮೇಲೆ ಕೆಲವರು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು. ಈ ಕುರಿತಂತೆ ಸ್ಥಳೀಂುರು ಅಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆಂುಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುಡಿಸಲು ತೆರವಿಗೆ ಮೂರು ದಿನಗಳ ಕಾಲಾವಕಾಶ ನೀಡಿತ್ತು. ಕಾಲಾವಧಿಂು ಗುರುವಾರ ಮುಕ್ತಾಂುಗೊಂಡ ಹಿನ್ನೆಲೆಂುಲ್ಲಿ ವಾಸ್ಕೋ ಪೊಲೀಸ್ ಅಧಿಕಾರಿಗಳ ಬಂದೋಬಸ್ತನಲ್ಲಿ ಗುಡಿಸಲನ್ನು ತೆರವುಗೊಳಿಸಲಾಯಿತು. ವಾಸ್ಕೊ ಪಿಐ ರೂಪೇಂದ್ರ ಸಾಳಗಾಂವ್ಕರ, ಇತರೆ ಗಣ್ಯರು ಹಾಜರಿದ್ದರು.