ರಾಂುಬಾಗ: ಬಿಜೆಪಿ ಕಾಂರ್ುಕರ್ತರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಆಗ್ರಹಿಸಿ ಜಿಪಂ ಅಧ್ಯಕ್ಷೆ ಶಾಂತಾ ಕಲ್ಲೋಳಿಕರ ನೇತೃತ್ವದಲ್ಲಿ ಬುಧವಾರ ಹಲವರು ಕುಡಚಿ ಪೊಲೀಸ್ ಠಾಣೆ ಎದುರು ಧರಣಿ ನಡೆಯಿಸಿದರು.
ಕುಡಚಿ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಲ್ಲಿಸಿದ್ದ ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ವೇಳೆಂುಲ್ಲಿ ಕಾಂಗ್ರೆಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಕಾಂಗ್ರೆಸ್ ಕಾಂರ್ುಕರ್ತರು ಪಕ್ಷೇತರ ಅಭ್ಯರ್ಥಿ ಶಿವರಾಜ ಬಸಗುಂಡೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು 17 ಜನರ ವಿರುದ್ಧ ಕುಡಚಿ ಪೊಲೀಸ್ ಠಾಣೆಂುಲ್ಲಿ ಪ್ರಕರಣ ದಾಖಲಾಗಿತ್ತು. ಸುಮಾರು 200 ಕಾಂರ್ುಕರ್ತರು ಧರಣಿಂುಲ್ಲಿ ಪಾಲ್ಗೊಂಡಿದ್ದರು. ಆರೋಪಿಗಳ ಮೇಲೆ ಜಾಮೀನು ಸಹಿತ ಪ್ರಕರಣ ದಾಖಲಾಗಿದ್ದರಿಂದ ಅವರನ್ನು ಬಂಧಿಸಿ ಮತ್ತೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪಿಎಸ್ ಐ ಡಿ. ಸಂತೋಷಕುಮಾರ ತಿಳಿಸಿದ್ದರು.