ಚೂರಿ ಇರಿತ: ಓರ್ವ ಗಾಯ

Updated on: 

ಬೆಳಗಾವಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಚೂರಿಯಿಂದ ಇರಿದು ವ್ಯಕ್ತಿಯೊಬ್ಬನನ್ನು ಗಾಯಗೊಳಿಸಿದ ಘಟನೆ ಮಂಗಳವಾರ ಸಂಜೆ ಕಸಾಯಿಗಲ್ಲಿಯಲ್ಲಿ ನಡೆದಿದೆ. ನ್ಯೂ ಗಾಂಧಿನಗರದ ಮೋಮಿನ್ ಮೆಹಬೂಬ್ ದಫೇದಾರ (30) ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂಧ ಆರೋಪಿ ಅಯೂಬ್ ಸರ್ಜೆಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಷುಲ್ಲಕ ಕಾರಣದಿಂದ ಅಯೂಬ್ ಜಗಳ ತೆಗೆದಿದ್ದರಿಂದ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತೆರಳಿದ್ದರಿಂದ ಅಯೂಬ್ ಚೂರಿಯಿಂದ ಮೋಮಿನ್‌ಗೆ ಇರಿದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಗೋಕಾಕ: ಮಹಾರಾಷ್ಟ್ರ ಮೂಲದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ  ಸಮೀಪದ ಫಾಲ್ಸ್ ರಸ್ತೆ ಗಾಂಧಿ ಪ್ರತಿಮೆ ಬಳಿ ಸಂಭವಿಸಿದೆ. ಮಹಾರಾಷ್ಟ್ರದ ಸಾಂಗ್ಲಿ ತಾಲೂಕಿನ ಸಾಲಿಗಾಂವ ಗ್ರಾಮದ ನಿವಾಸಿ ವಿಜಯ ಬಾಬುರಾವ ಪುಕಾಳೆ (56) ಮೃತಪಟ್ಟ ವ್ಯಕ್ತಿ. ಕಳೆದ ನಾಲ್ಕು ದಿನಗಳ ಹಿಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತದಾನ: ಸಂತೆ ರದ್ದು
ಗೋಕಾಕ: ಮಾ. 7ರಂದು ಮತದಾನ ಇರುವ ಕಾರಣ ಅಂದು ನಡೆಯುವ ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ. ಔದ್ರಾಮ ತಿಳಿಸಿದ್ದಾರೆ. ಪ್ರತಿ ಗುರುವಾರ ನಗರದಲ್ಲಿ ಸಂತೆ ನಡೆಯುತ್ತದೆ. ಆದರೆ ಅದೇ ದಿನ ನಗರಸಭೆಯ 29 ವಾರ್ಡ್‌ಗಳಿಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ, ಸಂತೆಯನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
ಬೆಳಗಾವಿ: ಇಲ್ಲಿನ ಚನ್ನಮ್ಮನಗರದ ನಿವಾಸಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಾರ್ತಾಂಡ ಭಟ್ ಶಿವಭಟ್ ಜೋಶಿ (96) ಸೋಮವಾರ ನಿಧನರಾದರು. ಮೃತರು ಮೂಲತಃ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದವರು. ಮೃತರಿಗೆ ಪುತ್ರ, ಆರುಪುತ್ರಿಯರು ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com