ಮಹಿಳೆ ಶವ ಪತ್ತೆ

Updated on: 

ಗೋಕಾಕ: ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿರುವ ನವಪ್ರಭಾ ಶಾಲೆಯ ಹತ್ತಿರ ಮಂಗಳವಾರ ಸಂಜೆ ಮಹಿಳೆಯೊಬ್ಬಳ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ತುಕ್ಕಾನಟ್ಟಿ ಗ್ರಾಮದ ರೇಣುಕಾ ಮಾರುತಿ ಮಲ್ಲಾಪೂರೆ (38) ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇದೊಂದು ನಿಗೂಢ ಸಾವು ಎಂದು ಸಂಶಯ ವ್ಯಕ್ತವಾಗಿದೆ. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ: 7 ಜನರ ಬಂಧನ
ಗೋಕಾಕ: ನಗರದ ಹೊರವಲಯದಲ್ಲಿರುವ ಗ್ರೀನ್ ಹೊಟೇಲ್‌ನಲ್ಲಿ ಅನಧೀಕೃತ ಮದ್ಯ ಸರಬರಾಜು ಮಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿ, 19730  ನಗದು ವಶಪಡಿಸಿಕೊಂಡಿದ್ದಾರೆ.  ಮಂಗಳವಾರ ರಾತ್ರಿ ಎಎಸ್‌ಪಿ ವರ್ತಿಕಾ ಕಟಿಯಾರ್ ಹಠಾತ್ತನೆ ದಾಳಿ ನಡೆಸಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ ಹೊಟೇಲ್‌ನಲ್ಲಿ ಗ್ರಾಹಕರಿಗೆ ಪರವಾನಿಗೆ ಇಲ್ಲದ ಮದ್ಯವನ್ನು ಪೂರೈಕೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ  ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com