ಕ.ಪ್ರ. ವಾರ್ತೆ ಬೆಳಗಾವಿ ಮಾ.13
ಫೆ.26 ರಂದು ಪರಿಚಯದ ಯುವಕನೊಬ್ಬ ತನ್ನನ್ನು ಪುಸಲಾಯಿಸಿ ಪರಊರಿಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಇಲ್ಲಿಯ ಖಡೇಬಜಾರದ ಯುವತಿ ಮಂಗಳವಾರ ಖಡೇಬಜಾರ್ ಪೊಲೀಸರಿಗೆ ದೂರು ನೀಡಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೇರವಾಡಿಯ ಸಾಯಿನಾಥ ಎಂಬಾತ ತನ್ನನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಯುವತಿ ದೂರಿದ್ದಾಳೆ. ದೂರು ನೀಡಿದ ಯುವತಿಯೂ ಮೂಲತಃ ಉತ್ತರ ಕನ್ನಡ ಜಿಲ್ಲೆಯವಳಾಗಿದ್ದು, ಇಲ್ಲಿಯ ಖಡೇಬಜಾರದಲ್ಲಿ ವಾಸವಿದ್ದಾಳೆ. ಯುವತಿ ಮತ್ತು ಆರೋಪಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಡೇಬಜಾರ್ ಸಿಪಿಐ ತಿಳಿಸಿದ್ದಾರೆ. ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.