ಬೆಳಗಾವಿ: ರಾಂುಬಾಗ ತಾಲೂಕಿನ ಇಟ್ನಾಳ ಗ್ರಾಮದ ಕುಖ್ಯಾತ ರೌಡಿ ಸದಾಶಿವ ಡಾಂಗೆಂುನ್ನು ಹಿಂಡಲಗಾ ಕಾರಾಗೃಹದಿಂದ ಶುಕ್ರವಾರ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಹೇಳಿದ್ದಾರೆ. ಗೂಂಡಾ ಕಾಯ್ದೆ ಹೇರಲಾದ ಆರೋಪಿಗಳನ್ನು ಅದೇ ಜಿಲ್ಲೆಯಲ್ಲಿಯೇ ಇಡುವಂತಿಲ್ಲ. ಇದೇ ಕಾಯ್ದೆಯನ್ನು ಡಾಂಗೆ ವಿರುದ್ಧ ಹೇರಿರುವುದರಿಂದ ಆತನನ್ನು ಸ್ಥಳಾಂತರಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಿ, ತನಿಖೆಗೆ ಆಗಮಿಸಿದ ಪೊಲೀಸ್ ಅಧಿಕಾರಿಯನ್ನೇ ಮನೆಯಲ್ಲಿ ವಿವಸ್ತ್ರಗೊಳಿಸಿ ಕೂಡಿ ಹಾಕಿದ್ದೂ ಸೇರಿದಂತೆ ಕೊಲೆ, ಸುಲಿಗೆ, ದರೋಡೆ ಸೇರಿ ಹಲವು ಕುಕೃತ್ಯದಲ್ಲಿ ಭಾಗಿ ಆರೋಪ ಡಾಂಗೆ ಮೇಲಿದೆ. ಆತನ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಿ ಇತ್ತೀಚಿಗೆ ಬಂಧಿಸಲಾಗಿದೆ.