ಚುನಾವಣೆ ಶಾಂತಿಯುತ ಇರಲಿ

Updated on: 

ಬೆಳಗಾವಿ: ದೇಶದಲ್ಲಿ 16ನೇ ಲೋಕಸಭೆ ಘೋಷಣೆಯಾದ ಬಳಿಕ ಆರೋಪ-ಪ್ರತ್ಯಾರೋಪ ಮಾಡುತ್ತ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರ ಹಾಗೂ ಬಿಜೆಪಿ ಸಂಸದ ಸುರೇಶ ಅಂಗಡಿ ಇಬ್ಬರು ಭಾನುವಾರ ಆಕಸ್ಮಿಕವಾಗಿ ಮುಖಾಮುಖಿಯಾಗಿ ಭೇಟಿಯಾದರು.
ಭಾನುವಾರ ನಗರದಲ್ಲಿ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಲಕ್ಷ್ಮೀ ಹೆಬ್ಬಾಳಕರ ಮತ್ತು ಸುರೇಶ ಅಂಗಡಿ ಅವರನ್ನ್ನು ಉದ್ದೇಶಿಸಿ ಮಾತನಾಡಿದ ಡಾ. ಚಿನ್ಮಯಸಾಗರಜೀ ಮಹಾರಾಜರು, ಚುನಾವಣೆ ಎಂದ ಬಳಿಕ ಜಿದ್ದಾಜಿದ್ದಿ ಸ್ಫರ್ಧೆಯಿರುವುದು ಸಾಮಾನ್ಯ. ನೀವು ಇಬ್ಬರು ಚುನಾವಣೆಯಲ್ಲಿ ಮುಖಾಮುಖಿಯಾಗಿ ಸ್ಪರ್ಧಿಸಿದ್ದರಿ. ಚುನಾವಣೆಯಲ್ಲಿ ಸೋಲು-ಗೆಲವು ಇದ್ದೆ ಇರುತ್ತದೆ. ಚುನಾವಣೆಗಿಂತಲೂ ಮಾನವ ಜನ್ಮ ದೊಡ್ಡದು. ಅದಕ್ಕಾಗಿ ದ್ವೇಷ-ಅಸೂಯೆ ಮರೆತು ಪರಸ್ಪರರು ಶುಭ ಕೋರಿ ಶಾಂತಿ ಸೌಹಾರ್ದತೆಯಿಂದ ಇರಬೇಕು ಎಂದು ಸಲಹೆ ಮಾಡಿದರು.
ಶ್ರೀಗಳ ಸಮ್ಮುಖದಲ್ಲಿಯೇ ಲಕ್ಷ್ಮಿ ಹೆಬ್ಬಾಳಕರ ಮತ್ತು ಸಂಸದ ಸುರೇಶ ಅಂಗಡಿ ಅವರು ಹಸ್ತಲಾಘವ ಮಾಡಿ, ಮಹಾವೀರ ಜಯಂತಿಯ ಶುಭಾಯ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಸಂಜಯ ಪಾಟೀಲ, ಕಾಂಗ್ರೆಸ್‌ನ ಶಾಸಕ ಫಿರೋಜ್ ಸೇಠ್ ಮತ್ತು ಅವರ ಬೆಂಬಲಿಗರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com