ಗೋಕಾಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮೊದಲು 7 ಬಾರಿ ಬಜೆಟ್ ಮಂಡನೆ ಮಾಡಿದ್ದರು. ಆಗ ಹಿಂದಿಳಿದ, ಅಲ್ಪ ಸಂಖ್ಯಾತರು ನೆನಪಾಗಲಿಲ್ಲವೆ? ಈಗ ಚುನಾವಣೆ ಸಂದರ್ಭದಲ್ಲಿ ಮಾತ್ರ ಅಹಿಂದ ಜನರು ನೆನಪಾಗುತ್ತಾರೆಯೇ? ಎಂದು ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.
ಸೋಮವಾರ ಅರಬಾವಿ ಕ್ಷೇತ್ರದ ಯಾದವಾಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪರ ಮತಯಾಚಿಸಿ ಮಾತನಾಡುತ್ತಿದ್ದರು. ವಿಶ್ವಗುರು ಬಸವಣ್ಣ, ಕನಕದಾಸರು, ಡಾ.ಅಂಬೇಡ್ಕರ್ ಜಗತ್ತು ಒಂದಾಗಬೇಕೆಂಬ ಕಲ್ಪನೆ ಹೊಂದಿದ ಅವರನ್ನು ಕಾಂಗ್ರೆಸ್ ಪಕ್ಷವು ಒಂದೊಂದು ಜಾತಿಗೆ ಸಿಮಿತ ಮಾಡಿ, ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಕಿತ್ತೂರ ಚನ್ನಮ್ಮ ಅವರು ಸಂಗೊಳ್ಳಿ ರಾಯಣ್ಣನನ್ನು ಮಗನೆ ಎಂದು ಕರೆದರು. ರಾಯಣ್ಣ ಚನ್ನಮ್ಮನನ್ನು ತಾಯಿ ಎಂದು ಕರೆದರು. ಎಲ್ಲಿದೆ ಹೇಳಿ ಜಾತಿ, ಮತದಾರರು ಜಾತಿ, ಭೇದ ಮಾಡದೇ, ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಮಂತ್ರಿ ಮಾಡಲು ಪ್ರತಿಯೊಬ್ಬರು ಬಿಜೆಪಿಗೆ ಮತ ನೀಡಬೇಕೆಂದರು.
ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದರೆ. ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಓಡಿಸುತ್ತಾರೆಂದು ಕಾಂಗ್ರೆಸ್ ನಾಯಕರು ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಡಾ. ಅಬ್ದುಲ ಕಲಾಂ ಅವರನ್ನು ಈ ದೇಶದ ರಾಷ್ಟ್ರ ಪತಿ ಮಾಡಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು. ಇಂತಹ ಕೆಲಸ ಕಾಂಗ್ರೆಸ್ ಮಾಡಿದೆಯೇ ಎಂದು ಪ್ರಶ್ನಿಸಿದರು. ಗುಜರಾತ್ ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರು ಸ್ವಾಭಿಮಾನದಿಂದ, ಆರ್ಥಿಕವಾಗಿ ಸಬಲರಾಗಿದ್ದಾರೆ. ಗುಜರಾತನಲ್ಲಿ ಅವರಿಗೆ ಭೂಮಿ ನೀಡಿ ಕೈಗಾರಿಕೆ ಮಾಡಲು ಅವಕಾಶ ನೀಡಿದ್ದಾರೆ. ಅಲ್ಲಿನ ಮುಸ್ಲಿಂ ಮಹಿಳೆಯರು ನರೇಂದ್ರ ಬಾಯಿ ಎಂದು ಕರೆಯುತ್ತಾರೆ.
ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಮಂತ್ರಿಯಾಗಲು ಸಂಸದ ಸುರೆಶ ಅಂಗಡಿ ಅವರು 3ನೇ ಭಾರಿಗೆ ಆಯ್ಕೆಯಾಗುತ್ತಾರೆ. ಅದರಲ್ಲಿ ಯಾವುದೆ ಸಂಶಯವಿಲ್ಲ ಎಂದರು. ನಾವೆಲ್ಲರು ಒಂದಾಗಿ ಈ ಚುನಾವಣೆಯನ್ನು ಏದುರಿಸುತ್ತೇವೆ. ಹೆಚ್ಚಿನ ಸಂಸದರು ಆಯ್ಕೆಯಾಗುತ್ತಾರೆ. ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ಮಧ್ಯಂತರ ಚುನಾವಣೆಯಾಗಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.
ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದರೆ ರಾಜಕೀಯದಿಂದ ನಿವೃತಿ ಹೊಂದುತ್ತೇನೆ ಎಂದು ದೇವೆಗೌಡ್ರ ಹೇಳಿದ್ದಾರೆ. ಆದರೆ ಗುಜರಾತ ರಾಜ್ಯದಲ್ಲಿ ಅವರ ಸಾಧನೆಯನ್ನು ಕಣ್ಣಿನಿಂದ ನೋಡಬೇಕು ಮಣ್ಣಿನ ಮಗ ಎಂದು ಹೇಳಿ ರೈತರಿಗೆ ಭೂಮಿಗೆ ನೀರು ಕೊಡಲಿಕ್ಕೆ ಆಗಲಿಲ್ಲಾ, ಮುಂದೆ ಗುಜರಾತ ಮಾದರಿ ಆಡಳಿತ ಈ ದೇಶಕ್ಕೆ ಬರುತ್ತದೆ. ತಾವು ನೋಡಬೇಕು ಎಂಬುದು ನಮ್ಮ ಆಶಯ ಎಂದರು.
ಪಕ್ಷದ ಅಭ್ಯರ್ಥಿ ಸುರೇಶ ಅಂಗಡಿ ಮಾತನಾಡಿ ದೇಶದಲ್ಲಿ 67 ವರ್ಷ ಕಾಂಗ್ರೆಸ್ ಆಳ್ವಿಕೆ ನಡೆಸಿದೆ. ಕಾಂಗ್ರೆಸ್ಗೆ ವಯಸ್ಸಾಗಿದೆ. ಈ ಚುನಾವಣೆಯಲ್ಲಿ ಮತದಾರರು ತಿರಸ್ಕರಿಸುವ ಮೂಲಕ ಅವರಿಗೆ ನಿವೃತ್ತಿ ಘೋಷಿಸಬೇಕು ಎಂದರು.