ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಏ.17 ರಂದು ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ನಿಯೋಜಿಸಲ್ಪಟ್ಟ ಎಲ್ಲ ಸಿಬ್ಬಂದಿ ಮತಗಟ್ಟೆಗಳಿಗೆ ಇವಿಎಂ ಮತಯಂತ್ರಗಳೊಂದಿಗೆ ತೆರಳಿದ್ದು, ಮತದಾರರು ಸಹ ಮತದಾನದ ದಿನದಂದು ತಪ್ಪದೇ ಮತ ಚಲಾಯಿಸಲು ಮತಗಟ್ಟೆಗಳಿಗೆ ಹೋಗಬೇಕು.
ಚುನಾವಣೆಗೆ ನಿಯೋಜಿಸಲ್ಪಟ್ಟ ವಿಧಾನಸಭಾವಾರು ಸಿಬ್ಬಂದಿ ಬುಧವಾರ ಮತಯಂತ್ರಗಳೊಂದಿಗೆ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಮತದಾನವು ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಮತದಾನಕ್ಕೆ ಬರುವ ಮತದಾರರು ಚುನಾವಣಾ ಆಯೋಗದಿಂದ ನೀಡಲ್ಪಟ್ಟ ಗುರುತಿನ ಕಾರ್ಡ್ನ್ನ್ನು ಕಡ್ಡಾಯವಾಗಿ ತರಬೇಕು. ಈ ಕಾರ್ಡ್ ಇಲ್ಲದವರು ಚುನಾವಣಾ ಆಯೋಗ ನಿಗದಿಪಡಿಸಿದ ಈ 11 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲ್ನೆ ತಂದು ಮತದಾನ ಮಾಡಬಹುದಾಗಿದೆ.
11 ದಾಖಲೆಗಳು: ಪಾಸ್ಪೋರ್ಟ್, ವಾಹನ ಚಾಲನಾ ಪರವಾನಿಗೆ, ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರಿಗೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ನೌಕರರಿಗೆ ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ನೀಡಲಾದ ಭಾವಚಿತ್ರ ಇರುವ ಗುರುತಿನ ಕಾರ್ಡ್, ಭಾವಚಿತ್ರ ಹೊಂದಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್, ಪ್ಯಾನ್ಕಾರ್ಡ್, ಆಧಾರ ಕಾರ್ಡ್, ಆರ್ಜಿಐದಿಂದ ಒದಗಿಸಿದ ಸ್ಮಾರ್ಟ್ ಕಾರ್ಡ್, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯಡಿ ನೀಡಿದ ಜಾಬ್ ಕಾರ್ಡ್, ಕಾರ್ಮಿಕ ಇಲಾಖೆಯ ಒದಗಿಸಿದ ಆರೋಗ್ಯ ವಿಮೆಯ ಸ್ಮಾರ್ಟ್ ಕಾರ್ಡ್, ಫೋಟೋ ಸಹಿತ ವಿಶ್ರಾಂತಿ ವೇತನ ದಾಖಲೆಗಳು, ಚುನಾವಣಾ ಅಧಿಕಾರಿಗಳಿಂದ ಒದಗಿಸಿದ ಅಧಿಕೃತ ಪೋಟೋ ವೋಟರ್ ಸ್ಲಿಪ್ಯನ್ನು ಸಹ ತೆಗೆದುಕೊಂಡು ಹೋಗಬಹುದು.
ಮತದಾರರ ಪಟ್ಟಿಯಲ್ಲಿರುವ ಎಲ್ಲ ಅರ್ಹ ಮತದಾರರು ಮತಗಟ್ಟೆಗಳಿಗೆ ತೆರಳಿ ತಪ್ಪದೇ ಮತ ಚಲಾಯಿಸುವುದರ ಮೂಲಕ ತಮ್ಮ ಕರ್ತವ್ಯ ನಿಭಾಯಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಜಯರಾಮ್ ಮನವಿ ಮಾಡಿದ್ದಾರೆ.