ನಿಪ್ಪಾಣಿ: ಶುಕ್ರವಾರ ಸಂಜೆ ಬೀಸಿದ ಭಾರಿ ಗಾಳಿಯಿಂದಾಗಿ ಮರವೊಂದು ಇಲ್ಲಿನ ನಿಪ್ಪಾಣಿ-ಅಕ್ಕೋಳ ರಸ್ತೆಯ ಮೇಲೆ ಹೋಗುತ್ತಿದ್ದ ಕಾರಿನ ಮೇಲೆ ಬಿದ್ದಿದೆ.
ಅಕ್ಕೋಳ ರಸ್ತೆಯಲ್ಲಿ ರಾಮಕೃಷ್ಣ ಸೊಳಾಕುರೆ ಅವರ ಮನೆ ಎದುರು ಕಾರು ಬಂದಾಗ ಏಕಾಏಕಿ ಬೀಸಿದ ಗಾಳಿಯಿಂದಾಗಿ ಮರ ಮಾರುತಿ ಆಲ್ಟೋ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ರಸ್ತೆಯ ಮೇಲೆ ಮರಬಿದ್ದ ಪರಿಣಾಮ ಸುಮಾರು ಒಂದು ಗಂಟೆಯವರೆಗೆ ಸಂಚಾರದಲ್ಲಿ ವ್ಯತಯ ಉಂಟಾಯಿತು.