ಹುಕ್ಕೇರಿ: ಪಟ್ಟಣದ ಹೊರವಲಂುದ ಬಸ್ತವಾಡ ರಸ್ತೆಗೆ ಅಂಟಿಕೊಂಡಿರುವ ನಿಸರ್ಗಲಿಂಗದ 13ನೆ ವಾರ್ಷಿಕ ಜಾತ್ರಾ ಮಹೋತ್ಸವ ನಿರಗುಡಿ ಬಾಲ ತಪಸ್ವಿ ಮಲ್ಲಿನಾಥ ಮಹಾರಾಜರ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಸೋಮವಾರ ನಡೆಯಿತು.
ಬೆಳಗ್ಗೆ ರುದ್ರಾಭಿಷೇಕ, ಪಟ್ಟಣದ ಬಾಬುರಾವ ಪೋತದಾರ ಮನೆಯಿಂದ ನಿಸರ್ಗಲಿಂಗ ಪಲಕ್ಕಿ ಉತ್ಸವ ಪ್ರಾರಂಭವಾಗಿ ಬಜಾರ ರಸ್ತೆ ಮೂಲಕ ನಿಸರ್ಗಲಿಂಗ ದೇವಸ್ಥಾನದವರೆಗೆ ತಲುಪಿತು. ನಂತರ ಅನ್ನದಾಸೋಹ ಜರುಗಿತು.
ವಸಂತ ಮುತಾಲಿ, ಪ್ರಭಾಕರ ಗಂಧ, ನಾಗಪ್ಪ ಪೋತದಾರ, ಕಾಳಪ್ಪ ಪೋತದಾರ ಕುಮಾರ ಶಿಂದೆ, ಲಲಿತ ಪೋತದಾರ, ಕೀರಣ ಪೋತದಾರ, ಸಾಗರ ಅಡಿಕೆ ಶೈಲ ಮತ್ತಿತತರು ಪಾಲ್ಗೊಂಡಿದ್ದರು.