ಬೆಳಗಾವಿ: ನಗರದ ಹೆಸ್ಕಾಂ ವಿದ್ಯುತ್ ನಿಗಮದ ಉಪ ವಿಭಾಗ ಮೂರರ ವ್ಯಾಪ್ತಿಯಲ್ಲಿ ಬರುವ ಗ್ರಾಹಕರ ಕುಂದು ಕೊರತೆಗಳ ಸಮಾಲೋಚನಾ ಸಭೆಯು ಬುಧವಾರ ನಡೆಯಿತು.
ಈ ಸಭೆಯಲ್ಲಿ ಮೂರನೇ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ನೂರಾರು ಗ್ರಾಹಕರು ಉಪಸ್ಥಿತರಿದ್ದು ವಿದ್ಯುತ್ ಪೂರೈಕೆಯಲ್ಲಿ ಈ ವಿಭಾಗದಲ್ಲಿರುವ ಕುಂದು ಕೊರತೆ ತೊಂದರೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಗ್ರಾಹಕರು ಸಮಸ್ಯೆಗಳನ್ನು ಆಲಿಸಿದ ಹೆಸ್ಕಾಂ ಅಧಿಕಾರಿಗಳು ತೊಂದರೆಗಳನ್ನು ನಿವಾರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಹೆಸ್ಕಾಂ ಅಧಿಕಾರಿಗಳಾದ ಎ.ಎಂ ಶಿಂಧೆ, ಎ.ಪಿ ಪಾಟೀಲ್, ಸುಧೀರ್ ಗುಣಗಿ, ವಿಲಾಸ್ ಪಿ, ಬಿ.ಎಫ್. ಬನ್ನ್ನೂರ ಇದ್ದರು.
ಉಚಿತ ಹೃದಂುರೋಗ ತಪಾಸಣೆ ಶಿಬಿರ
ಸವದತ್ತಿ: ಇಲ್ಲಿಯ ಜೈಂಟ್ ಗ್ರೂಪ್, ಐ.ಎಂ.ಎ ಹಾಗೂ ಎಸ್.ಡಿ.ಎಂ. ನಾರಾ ಂುಣ ಹಾರ್ಟ್ ಸೆಂಟರನ ಸಂಂುಕ್ತ ಆಶ್ರಂುದಲ್ಲಿ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಂುಲ್ಲಿ ತಜ್ಞ ವೈದ್ಯರಿಂದ ಏ.26ರಂದು ಉಚಿತ ಹೃದಂು ರೋಗ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ನಡೆಂುಲಿರುವ ಶಿಬಿರದಲ್ಲಿ ತಜ್ಞ ವೈದ್ಯರಿಂದ ಹೃದಯ ಆರೋಗ್ಯ ರಕ್ಷಣೆಂು ಬಗ್ಗೆ ಉಪಂುಕ್ತ ಮಾಹಿತಿ ನೀಡಲಾಗುತ್ತದೆ. ಈ ಶಿಬಿರದಲ್ಲಿ ಬಿಪಿ, ಇಸಿಜಿ, ಇಕೋ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುತ್ತದೆ. ಸಾರ್ವಜನಿಕರು ಬರುವಾಗ ತಮ್ಮ ಮೋದಲಿನ ರಿಪೋರ್ಟ್ಗಳು, ಬಿಪಿಎಲ್, ಸಂಜೀವಿನಿ ಇನ್ನಿತರೆ ಂಾವುದೇ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಹಾಜರಾಗಬೇಕೆಂದು ನಾಗರಾಜ ಪದಕಿ ತಿಳಿಸಿದ್ದಾರೆ.