ಹುಕ್ಕೇರಿ: ತಾಲೂಕಿನ ಶಿರೂರ ಹಾಗೂ ಹಾರನಕೊಳ್ಳ ಜಂಗಲ್ ಪ್ರದೇಶದಲ್ಲಿ ಕಳ್ಳಭಟ್ಟಿ ತಂಾರಿಕೆ ಘಟಕದ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿ, ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಹುಕ್ಕೇರಿ ಅಬಕಾರಿ ಇಲಾಖೆ, ಗೋಕಾಕ ಹಾಗೂ ಬೆಳಗಾವಿ ಲಾಟರಿ ನಿಷೇಧ ದಳ ಮತ್ತು ಂುಮನಕಮರಡಿ ಪೊಲೀಸ್ ಇಲಾಖೆಂುವರು ಸಾಮೂಹಿಕ ದಾಳಿ ನಡೆಸಿ, ಕಳ್ಳಭಟ್ಟಿ ಸಾರಾಯಿ ತಂಾರಿಸಲು ಸಂಗ್ರಹಿಸಿಟ್ಟದ್ದ 3200 ಲೀಟರ್ ಬೆಲ್ಲದ ರಸಾಂುನ, 120 ಲೀಟರ್ ಕಳ್ಳಭಟ್ಟಿ ಸಾರಾಯಿ ಜಪ್ತಿ ಮಾಡಿಕೊಂಡಿದ್ದಾರೆ. ಜಪ್ತಿ ಮಾಡಿಕೊಳ್ಳಲಾದ ಮುದ್ದೇಮಾಲಿನ ಮೌಲ್ಯವನ್ನು ರು. 1.76 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿಂುಲ್ಲಿ ಅಬಕಾರಿ ನಿರೀಕ್ಷಕರಾದ ವಿನೋದ ಢಾಂಗೆ, ಎಸ್.ಆರ್. ಕಟ್ಟಿಮನಿ ಇತರರು ಇದ್ದರು.