ಸಂಭ್ರಮದ ಶಿವ ಜಯಂತಿ

Updated on: 

ಗೋಕಾಕ: ಭಾರತೀಯ ಸಂಸ್ಕೃತಿಯ ಪ್ರತೀಕ ಹಾಗೂ ಹಿಂದು  ಸಾಮ್ರಾಜ್ಯ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜ ಅವರ ಜಯಂತಿಯನ್ನು ಬುಧವಾರ ನಗರದ ಮರಾಠಾ ಗಲ್ಲಿಯಲ್ಲಿ  ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಾಭಿಷೇಕದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪೂಜೆ ಸಲ್ಲಿಸಲಾಯಿತು.  ಮರಾಠಾ ಸಮಾಜದ ಅಧ್ಯಕ್ಷ ಪುಂಡಲೀಕ ಗುಡ್ಡದಮನಿ ಮಾತನಾಡಿ, ಶಿವಾಜಿ ಮಹಾರಾಜ ಅವರು ದೇಶಪ್ರೇಮವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.  ಸಮಾಜದ ಉಪಾಧ್ಯಕ್ಷ ಕೇದಾರೆಪ್ಪಾ ಸುಭಂಜಿ, ಸತ್ತೆಪ್ಪ ಸುಭಂಜಿ, ನಗರಸಭೆ ಮಾಜಿ ಸದಸ್ಯ ಜ್ಯೋತಿಬಾ ಸುಭಂಜಿ, ಅಶೋಕ ತುಕ್ಕಾರ, ಶಿದ್ದಪ್ಪ ಮುರಾರಿ, ಫಕೀರಪ್ಪಾ ತೇರದಾಳ, ಶಿವಾಜಿ ಕಲ್ಲೋಳ್ಳಿ, ಜೈ ಭವಾನಿ ಯುವಕ ಮಂಡಳದ ಅಧ್ಯಕ್ಷ ಕೃಷ್ಣಾ ಗುಡ್ಡದಮನಿ, ಸದಸ್ಯರಾದ ಭೀಮಶಿ ಕಲ್ಲೋಳ್ಳಿ, ರವಿ ಖನಗಾಂವಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಿನೈಕರ್ ಪತ್ರ: ಕ್ರಮಕ್ಕೆ ನಿರ್ದೇಶನ
ಖಾನಾಪುರ: ಹಳಿಂಾಳ ವಿಧಾನಸಭೆ ಕ್ಷೇತ್ರದಿಂದ ಆಂ್ಕುಂಾಗಿರುವ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರು ಸ್ಥಿರ ಮತ್ತು ಚರಾಸ್ಥಿಗಳ ಸಂಪೂರ್ಣ ಮಾಹಿತಿ ನೀಡಿಲ್ಲ ಎಂದು ಖಾನಾಪುರದ ಜಂುಂತ ತಿನೈಕರ ಜೂ.2 2014 ರಂದು ಕೇಂದ್ರ ಚುನಾವಣಾ ಅಂೋಗ ದೂರು ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ದೂರಿನ ಪ್ರತಿ ಲಗತ್ತಿಸಿ ಪತ್ರದ ಸೂಚನೆ ಪ್ರಕಾರ ಉಲ್ಲೇಖದ ಮನವಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದು ಉಪಮಖ್ಯ ಚುನಾವಣಾಧಿಕಾರಿ ಮತ್ತು ಪದ ನಿಮಿತ್ತ ಸರ್ಕಾರದ ಉಪ ಕಾಂರ್ುದರ್ಶಿ ಪಿ.ಟಿ.ಕುಲಕರ್ಣಿ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.  ಈ ಸಂಬಂಧ ಸಮಾಜ ಸೇವಕ ಜಂುಂತ ತಿನೈಕರ ಅವರಿಗೂ ಪ್ರತಿಂುನ್ನು ಕಳಿಸಲಾಗಿದೆ.  
ರಸ್ತೆ ಅಪಘಾತ: ಇಬ್ಬರು ಸಾವು
ಬೆಳಗಾವಿ: ಸಂಕೇಶ್ವರ ಪಟ್ಟಣ ಬಳಿಯ ಪುಣಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಬುಧವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದಾರೆ.  ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ನಿವಾಸಿಗಳಾದ ಏಕನಾಥ ಸುತಾರ(51), ಪವನ ಮೊಳೆ(31) ಮೃತಪಟ್ಟವರು.  ಬುಧವಾರ ಸಂಜೆ ಇವರಿಬ್ಬರು ಬೈಕ್ ಮೇಲೆ ಬೆಳಗಾವಿ ಮಾರ್ಗವಾಗಿ ಕೊಲ್ಲಾಪುರಕ್ಕೆ ಹೋಗುವಾಗ ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಈ ರಸ್ತೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com