ಸವದತ್ತಿ: ಜನಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಅದನ್ನು ಹತೋಟೆಗೆ ತರಬೇಕಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಂುಡಿಯೂರಪ್ಪ ಹೇಳಿದರು.
ಸ್ಥಳೀಂು ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಆಂೋಜಿಸಲಾಗಿದ್ದ ಭಾರತ ಗೆಲ್ಲಿಸಿ ಕಾಂರ್ುಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳೆಂುರಿಗೆ ರಕ್ಷಣೆ ಜೊತೆಗೆ ಉದ್ಯೋಗವಕಾಶ, ಗುಜರಾತ ರಾಜ್ಯದ ಮಾದರಿಂುನ್ನು ದೇಶಕ್ಕೆ ಅನ್ವಯಿಸುವುದು, ಅನ್ನದಾತನಿಗೆ ನೀರಾವರಿ ಂೋಜನೆಂುಲ್ಲಿ ಪರಿಹಾರ ನೀಡಿ ಸರ್ವಶಕ್ತ ರಾಷ್ಟ್ರ ಕಟ್ಟಬೇಕಿದೆ ಎಂದರು. ಪ್ರತಿ ಗ್ರಾಮಗಳಲ್ಲಿ ಬೂತ್ ಮಟ್ಟದಿಂದ ಚುನಾವಣೆ ಕಾಂರ್ು ಚುರುಕುಗೊಳಿಸಬೇಕು ಎಂದರು. ಸಂಸದ ಸುರೇಶ ಅಂಗಡಿ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರಾಗಲಿ, ಮಾಜಿ ಸಿಎಂ ಕುಮಾರಸ್ವಾಮಿಯಾಗಲಿ ಕಳಸಾ ಬಂಡೂರಿ ನಾಲಾ ಂೋಜನೆಂುಲ್ಲಿ ಆಸಕ್ತಿ ತೋರಿಲ್ಲ. ಅವರಿಗೆ ರೈತರ ಬಗ್ಗೆ ಕಾಳಜಿಯೂ ಇಲ್ಲ ಎಂದು ಆರೋಪಿಸಿ, ಕರ್ನಾಟಕದ ಅಭಿವೃದ್ಧಿಗೆ ಬಿಎಸ್ವೈ ಅವರ ಕೊಡುಗೆ ಅಪಾರ ಎಂದರು.
ಟೆಂಡರ್ ಪ್ರಕ್ರಿಯೆ ನಡೆಯುತ್ತಿಲ್ಲ: ಶಾಸಕ ಆನಂದ ಮಾಮನಿ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಬಿಎಸ್ವೈ ಅವರ ಕಾಂರ್ು ಶ್ಲಾಘನೀಂು. 2009ರಲ್ಲಿ ರು. 50 ಕೋಟಿ ಂುಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆಂದು ನೀಡಿದ್ದು ಮತ್ತು ರಸ್ತೆ ಸೌಲಭ್ಯ ಕಲ್ಪಿಸಿದ್ದು ಬಿಎಸ್ವೈ ಅವರು ಎಂದು ಹೇಳಿದರು. ಪ್ರಸಕ್ತ ಸರ್ಕಾರದ ಲೋಕೋಪಂೋಗಿ ಇಲಾಖೆಯಿಂದ ರಸ್ತೆ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಂು ನಡೆಂುತ್ತಿಲ್ಲ ಮತ್ತು ಗೋವಿನ ಜೋಳದ ಆವರ್ತ ನಿಧಿಗೆ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ರಾಮದುರ್ಗ ಮಾಜಿ ಶಾಸಕ ಮಹಾದೇವ ಪಟ್ಟಣ, ಪುರಸಭೆ ಅಧ್ಯಕ್ಷೆ ಬಸಮ್ಮ ಅಮಾತೆಣ್ಣವರ, ಜಿಪಂ ಸದಸ್ಯೆ ವಿದ್ಯಾರಾಣಿ ಸೊನ್ನದ, ಮಾಜಿ ಶಾಸಕ ರಾಜಣ್ಣ ಮಾಮನಿ, ಎಸ್.ಎಸ್. ಪಾಟೀಲಪದಕಿ, ಮಹಾದೇವಪ್ಪ ನೀಲಪ್ಪನವರ, ಪುರಸಭೆ ಉಪಾಧ್ಯಕ್ಷ ಸುಭಾಷ ರಜಪುತ ಇದ್ದರು.