20 ನಿಮಿಷ 20 ಸುದ್ದಿ

Updated on: 

ಪಣಜಿ: ಶನಿವಾರ ಸಂಜೆ ಪಣಜಿಂುಲ್ಲಿ ಆಂೋಜಿಸಿದ್ದ ಶಿಗ್ಮೋತ್ಸವದಲ್ಲಿ 50ಕ್ಕೂ ಹೆಚ್ಚು ಚಿತ್ರರಥಗಳು, ಡೋಲು ಕುಣಿತ ತಂಡ, ಲೋಕನೃತ್ಯ ತಂಡಗಳು ಪಾಲ್ಗೊಂಡಿದ್ದವು. ಶಿಗ್ಮೋತ್ಸವದ ನಿಮಿತ್ತ ರಾಜಧಾನಿಂುಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.  ಪಣಜಿಂು ಮಾರುಕಟ್ಟೆಂು ಮುಖ್ಯ ರಸ್ತೆಂುಲ್ಲಿ ಶಿಗ್ಮೋತ್ಸವ ಚಿತ್ರರಥ ಮೆರವಣಿಗೆಂುನ್ನು ಆಂೋಜಿಸಲಾಗಿತ್ತು. ಈ ನಿಮಿತ್ತ ವಾಹನ ಸಂಚಾರಕ್ಕಾಗಿ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಿಗ್ಮೋತ್ಸವ ಚಿತ್ರರಥಗಳ, ಲೋಕನೃತ್ಯಗಳ ವೀಕ್ಷಣೆಗಾಗಿ ಲಕ್ಷಾಂತರ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು.

ಚರ್ಚಿಲ್ ಅಲೆಮಾಂವ ಕಾಂಗ್ರೆಸ್‌ಗೆ ರಾಜಿನಾಮೆ
ಪಣಜಿ: ಮಾಜಿ ಸಚಿವ, ಗೋವಾ ರಾಜ್ಯ ಕಾಂಗ್ರೆಸ್ ಪ್ರಮುಖ ಚರ್ಚಿಲ್ ಅಲೆಮಾಂವ ಕಾಂಗ್ರೆಸ್ ಪಕ್ಷಕ್ಕೆ ಶನಿವಾರ ರಾಜಿನಾಮೆ ನೀಡಿದ್ದು, ಲೋಕಸಭಾ ಚುನಾವಣೆಂುಲ್ಲಿ ತಾವು ಸ್ವತಂತ್ರ ಅಭ್ಯರ್ಥಿಂಾಗಿ ಕಣಕ್ಕಿಳಿಂುವುದಾಗಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ವರಿಷ್ಠರು ದಕ್ಷಿಣ ಗೋವಾದಿಂದ ಲೋಕಸಭಾ ಚುನಾವಣೆಂುಲ್ಲಿ ಸ್ಪರ್ಧಿಸಲು ಅಲೆಕ್ಸ್ ರೆಜಿನಾಲ್ಡ್ ಅವರಿಗೆ ಟಿಕೆಟ್ ನೀಡಿರುವುದನ್ನು ಮರು ಪರಿಶೀಲಿಸಿ, ನಿರ್ಣಂುವನ್ನು ಹಿಂತೆಗೆದುಕೊಳ್ಳಲು ಚರ್ಚಿಲ್ ಅಲೆಮಾಂವ ಅವರು ಶನಿವಾರ ಬೆಳಗ್ಗೆ 11ಗಂಟೆವರೆಗೆ ವರಿಷ್ಠರಿಗೆ ಗಡುವು ನೀಡಿದ್ದರು.  ಆದರೆ ಶನಿವಾರ ಕಾಂಗ್ರೆಸ್ ವರಿಷ್ಠರು ತಮ್ಮ ನಿರ್ಣಂು ಬದಲಿಸದ ಕಾರಣ ಚರ್ಚಿಲ್ ಅಲೆಮಾಂವ ಅವರು ಪ್ರದೇಶ ಕಾಂಗ್ರೆಸ್ ಸಮಿತಿಂು ಅಧ್ಯಕ್ಷ ಜಾನ್ ಫರ್ನಾಂಡೀಸ್ ಅವರಿಗೆ ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು. ಕಾಂಗ್ರೆಸ್ ಪಕ್ಷದಿಂದ ÔæàÁÚ…¶M¦ÁÚßÈÚ ನಾನು ಇದೀಗ ದಕ್ಷಿಣ ಗೋವಾದಿಂದ ಪಕ್ಷೇತರ ಅಭ್ಯರ್ಥಿಂಾಗಿ ಕಣಕ್ಕಿಳಿಂುಲಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಅಪಘಾತ: 18 ಜನರಿಗೆ ಗಾಯ
ಪೊಂಡಾ: ಮಂಗೇಶಿ ಸರ್ಕಲ್ ಹತ್ತಿರ ಶುಕ್ರವಾರ ಸಂಜೆ ಖಾಸಗಿ ಬಸ್, ಟ್ರಕ್, ಮಾರುತಿ ವ್ಯಾನ್ ನಡುವೆ ಸಂಭವಿಸಿದ ಅಪಘಾತದಲ್ಲಿ 18 ಜನರು ಗಾಂುಗೊಂಡ ಘಟನೆ ನಡೆದಿದೆ. ಇವರಲ್ಲಿ ಓರ್ವ ಚಾಲಕನ ಸ್ಥಿತಿ ಗಂಭೀರವಾಗಿದ್ದು, ಮತ್ತೋರ್ವ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ. ಶುಕ್ರವಾರ ಸಂಜೆ 5.30ರ ಸುಮಾರಿಗೆ ಪೊಂಡಾ ಮಾರ್ಗವಾಗಿ ಸಾಗುತ್ತಿದ್ದ ಬಸ್ ಎಕೇರಿ ಭಾಗದಲ್ಲಿ ಡಾಂಬರೀಕರಣ ಕಾಮಗಾರಿ ನಡೆಂುತ್ತಿರುವುದರಿಂದ ಒಳಮಾರ್ಗದ ಮೂಲಕ ಹೋಗುತ್ತಿತ್ತು. ಮಂಗೇಶಿ ಸಮೀಪಿಸುತ್ತಿದ್ದ ಸಂದರ್ಭದಲ್ಲಿ ಬಸ್ ಚಾಲಕನ ನಿಂುಂತ್ರಣ ತಪ್ಪಿ ಟ್ರಕ್‌ಗೆ ಡಿಕ್ಕಿ ಹೊಡೆಯಿತು. ಮಂಗೇಶಿಯಿಂದ ಮೆರಶಿಗೆ ತೆರಳುತ್ತಿದ್ದ ಮಾರುತಿ ವ್ಯಾನ್ ಡಿಕ್ಕಿ ಸಂಭವಿಸಿ ವ್ಯಾನ್ ರಸ್ತೆಯಿಂದ ಪಕ್ಕಕ್ಕೆ ಉರುಳಿ ಬಿದ್ದಿದೆ. ಈ ವ್ಯಾನದಲ್ಲಿದ್ದ ರಾಮೇಶ ರಲಾಲ್ ಮತ್ತು ಗೀತಾ ಪ್ರಾಣಾಪಾಂುದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಬಸ್ ಮುಂಭಾಗ ನುಜ್ಜುಗುಜ್ಜಾಗಿದ್ದು ಚಾಲಕ ಪ್ರಿತೇಶ ನಾಂುಕ ಗಂಭೀರವಾಗಿ ಗಾಂುಗೊಂಡಿದ್ದಾನೆ. ಪೊಂಡಾ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾವಚಿತ್ರ ಮೆರವಣಿಗೆ...
ಮುದ್ದೇಬಿಹಾಳ ಪಟ್ಟಣದ ವೀರ ಮಹೇಶ್ವರಿ ತರುಣ ಸಂಘ ಹಾಗೂ  ಜಂಗಮ ಸಮಾಜದ ಸಹಯೋಗದಲ್ಲಿ ಜಗದ್ಗುರು ರೇಣುಕಾಚಾರ್ಯ ಭಗವತ್ಪಾದರ ಜಯಂತ್ಯುತ್ಸವ ನಿಮಿತ್ತ ಪಟ್ಟಣದಲ್ಲಿ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು.

ಸಾಂಭಪ್ರಭು ಶರಣಮುತ್ಯಾನ ಜಾತ್ರಾ ಮಹೋತ್ಸವ
ತಾಳಿಕೋಟೆ: ಪಟ್ಟಣದ ಸದ್ಗುರು ಸಾಂಭಪ್ರಭು ಶರಣಮುತ್ಯಾರವರ 151ನೇ ಜಾತ್ರಾ ಮಹೋತ್ಸವ ಶುಕ್ರವಾರ ಸಂಭ್ರಮದಿಂದ ಜರುಗಿತು. ಗುರವಾರ ಸಂಜೆ ಸುರಪುರ ತಾಲೂಕಿನ ಕರಿಭಾವಿಯಿಂದ ನಂದಿಕೋಲು ಹಾಗೂ ಕಳಸಗಳನ್ನು ತರಲಾಯಿತು. ಬೆಳಗ್ಗೆಯಿಂದಲೆ ನೂರಾರು ಭಕ್ತರು ತಮ್ಮ ಮನೆಗಳಿಂದ ಶರಣಮುತ್ಯಾನ ದೇವಸ್ಥಾನದವರೆಗೆ ಸಾಷ್ಟಾಂಗ (ದೀಢ) ನಮಸ್ಕಾರ ಹಾಕಿ ತಮ್ಮ ಭಕ್ತಿ ಪ್ರದರ್ಶನ ಮಾಡಿದರು. ಸಂಜೆ ಜಾತ್ರಾ ಮಹೋತ್ಸವಕ್ಕೆ ಮುನ್ನ ಶರಣರ ಮಠದ ಪೀಠಾಧಿಕಾರಿ ಶರಣಪ್ಪ ಶರಣರು ಹಾಗೂ ಕುಟುಂಬದವರು ರಥೋತ್ಸವಕ್ಕೆ ಚಾಲನೆ ನೀಡಿದರು. ಜಾತ್ರೆಯ ಅಂಗವಾಗಿ ಶನಿವಾರದಿಂದ ದನಗಳ ಜಾತ್ರೆ ಆರಂಭವಾಗಿದೆ. 5 ದಿನಗಳ ಕಾಲ ಜಾತ್ರೆ ನಡೆಯಲಿದೆ.
ದ್ದು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ದನಗಳ ಬಹುಮಾನ ವಿತರಣೆ ಇಲ್ಲ ಎಂದು ಎಪಿಎಮ್‌ಸಿ ಕಾರ್ಯದರ್ಶಿ ಎಸ್.ಎಸ್.ಪತ್ತಾರ ತಿಳಿಸಿದ್ದಾರೆ.

ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ಅಗತ್ಯ: ಪಾಟೀಲ
ದೇವರಹಿಪ್ಪರಗಿ: ಇಂದಿನ ಯುವಕರಿಗೆ ಮಾನವೀಯ ಮೌಲ್ಯ ಬೆಳೆಸುವ ಶಿಕ್ಷಣ ನೀಡುವ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಶಿಕ್ಷಕವೃಂದ ಶ್ರಮಿಸಬೇಕು ಎಂದು ನಾಗರಿಕ ಸೌಲಭ್ಯ ಸಮಿತಿ ಸದಸ್ಯಶಂಕರಗೌಡ ಪಾಟೀಲ ಹೇಳಿದರು.  ಶುಕ್ರವಾರ ಇಲ್ಲಿನ ಹೊಸನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಏಳನೇ ತರಗತಿ ಮಕ್ಕಳಿಗೆ ಶುಭ ಕೋರುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಆರ್. ಕೊಕಟನೂರ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಒಂಟೆತ್ತೀನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸದಸ್ಯರಾದ ದಾವಲಸಾಬ ಯರಗಲ್ಲ, ಇಂಡಿಮಠ, ಎ.ಆರ್. ಪಾಟೀಲ, ಎ.ಎಂ. ಕುಮುಸಗಿ, ಡಿ.ಎಂ. ನದಾಫ ಮತ್ತಿತರರು ಉಪಸ್ಥಿತರಿದ್ದರು. ಟಿ.ಕೆ. ಪತ್ತಾರ ಸ್ವಾಗತಿಸಿದರು, ಎ.ಎಚ್. ವಾಲೀಕಾರ ನಿರೂಪಿಸಿ, ಆರ್.ಕೆ. ಬಸರಗಿ ವಂದಿಸಿದರು.

ಪಟ್ಟಣದ ಅಭಿವೃದ್ಧಿಗೆ ಬದ್ಧ: ಸುಶೀಲಾಬಾಯಿ
ಇಂಡಿ: ಪಕ್ಷಾತೀತವಾಗಿ ಪುರಸಭೆಯ ಎಲ್ಲ ಸದಸ್ಯರ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ನೂತನ ಪುರಸಭೆ ಅಧ್ಯಕ್ಷೆ ಸುಶೀಲಾಬಾಯಿ ರಾಠೋಡ ತಿಳಿಸಿದ್ದಾರೆ. ಶುಕ್ರವಾರ ಪುರಸಭೆಯ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದ ಜನತೆಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಶೌಚಾಲಯ, ಬೀದಿ ದೀಪದ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಅಭಿವೃದ್ಧಿಗೆ ಎಲ್ಲ ಸದಸ್ಯರು ಬೆಂಬಲ ಸೂಚಿಸಿದ್ದಾರೆ.ಅವರ ಹಾಗೂ ಪಕ್ಷದ ಹಿರಿಯರ  ಮಾರ್ಗದರ್ಶನದಲ್ಲಿ  ನನ್ನ ಅಧಿಕಾರವಧಿಯಲ್ಲಿ ಮಾದರಿ ಪಟ್ಟಣವಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಪಟ್ಟಣದಲ್ಲಿ ಪ್ರಾರಂಭವಾದ ಒಳಚರಂಡಿ ಕಾಮಗಾರಿ ಬೇಗನೆ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು. ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಉತ್ತಮ ರಸ್ತೆ ನಿರ್ಮಾಣ ಮಾಡುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದರು.
ಉಪಾಧ್ಯಕ್ಷೆ ಮಲಕವ್ವ ಭೀಮರಾಯ ಕುಂಬಾರ, ಬಿಜೆಪಿ ತಾಲೂಕ ಅಧ್ಯಕ್ಷ ಅನೀಲ ಜಮಾದಾರ, ಭೀಮನಗೌಡ ಪಾಟೀಲ, ದೇವೆಂದ್ರ ಕುಂಬಾರ, ಶಾಂತು ಶಿರಕನಳ್ಳಿ, ಬುದ್ದುಗೌಡ ಪಾಟೀಲ, ಅರ್ಜುನ ಪಾರ್ಶಿ, ಶಕುಂತಲಾ ಕದಂ, ಸಿದ್ದಪ್ಪ ಗುಡ್ಲ, ಶಂಕರ ಕೊಡೆ, ಸೋಮು ನಿಂಬರಗಿಮಠ,ಅನೀಲ ಬಿರಾದಾರ, ಸಿದ್ದು ಡಂಗಾ, ಲಿಂಬು ರಾಠೋಡ, ಮಲ್ಲು ಚವ್ಹಾಣ, ಭೀಮ ಕುಂಬಾರ, ಮೋಹನ ಲಮಾಣಿ ಹಾಗೂ ಪುರಸಭೆ ಮುಖ್ಯಾಧಿಕಾರಿ ಐ.ಎಸ್.ದಡ್ಡಿ ಈ ಸಂದರ್ಭದಲ್ಲಿ ಇದ್ದರು.

ನುಡಿದಂತೆ ನಡೆಯುವುದು ಶರಣ ಸಾಹಿತ್ಯದ ತತ್ವ
ಬಿಜಾಪುರ: ನುಡಿದಂತೆ ನಡೆಯುವುದು ಶರಣ ಸಾಹಿತ್ಯದ ತತ್ವ ಎಂದು ಸಿಂದಗಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ.ಎಂ. ಪಡಶೆಟ್ಟಿ  ಹೇಳಿದರು.  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಶರಣ ಸಾಹಿತ್ಯ ಒಂದು ಚಿಂತಣ ಕುರಿತು ಏರ್ಪಡಿಸಿದ್ದ ದತ್ತಿ ನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ಹಿರಿಯ ಸಾಹಿತಿ ಮಹಾಂತ ಗುಲಗಂಜಿ ಕಾರ್ಯಕ್ರಮ ಉದ್ಘಾಟಿಸಿದರು.  ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.  ದಾನಿಗಳಾದ ಪ್ರೊ. ಎಸ್.ಕೆ.ಬಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಅಶೋಕ ಟಿ.ಮುದಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್.ಆರ್.ಕುಂಬಾರ ಸ್ವಾಗತಿಸಿದರು. ಪ್ರೊ. ಬಿ.ಜಿ.ಪತ್ತಾರ ನಿರೂಪಿಸಿದರು. ಪ್ರೊ.ಎಸ್.ಎಸ್. ರಾಜಮಾನ್ಯ ವಂದಿಸಿದರು.

ತಾಂತ್ರಿಕ ತೊಂದರೆ: ತರಬೇತಿ ಕಾರ್ಯಾಗಾರ ರದ್ದು
ಮುದ್ದೇಬಿಹಾಳ: ಪಟ್ಟಣದ ತಾಪಂ ಸಭಾಭವನದಲ್ಲಿ ಶುಕ್ರವಾರ ನಡೆಯಬೇಕಿದ್ದ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ನ್ಯಾಯಬೆಲೆ ಅಂಗಡಿಕಾರರ ಒಂದು ದಿನದ ಸೆಟಲೈಟ್ ತರಬೇತಿ ಕಾರ್ಯಾಗಾರ ತಾಂತ್ರಿಕ ತೊಂದರೆಯಿಂದ ರದ್ದುಗೊಂಡಿದೆ. ಸರ್ಕಾರ ಪಡಿತರ ಖಾತ್ರಿ ಯೋಜನೆ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಕಾರರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳ ಕುರಿತು ಇಲಾಖೆಯ ಆಯುಕ್ತ ಹರ್ಷ ಗುಪ್ತಾ ಅವರೇ ನೇರವಾಗಿ ವಿಡಿಯೋ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ವಿವಿಧೆಡೆಯಿಂದ ನ್ಯಾಯಬೆಲೆ ಅಂಗಡಿಕಾರರು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಸೆಟಲೈಟ್ ತರಬೇತಿ ಸಮಯಕ್ಕೆ ಸರಿಯಾಗಿ ಪ್ರಾರಂಭಗೊಂಡಿತಾದರೂ ತಾಂತ್ರಿಕ ಅಡಚಣೆ ಕಂಡುಬಂತು. ಹಲವು ಬಾರಿ ಪ್ರಯತ್ನಿಸಿದರೂ ಸೆಟಲೈಟ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಹೀಗಾಗಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ.

ಮೆರವಣಿಗೆ...
ಬಿಜಾಪುರ ಲೋಕಸಭೆ ಮೀಸಲು ಮತ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಕೋರಿ ನಾಮಪತ್ರ ಸಲ್ಲಿಸಲು ಶನಿವಾರ ಸಂಸದ ರಮೇಶ ಜಿಗಜಿಣಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಅಪಾರ ಬಿಜೆಪಿ ಕಾರ್ಯಕರ್ತರ ಭವ್ಯ ಮೆರವಣಿಗೆಯಲ್ಲಿ ತೆರಳುತ್ತಿರುವುದು.

ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ
ಮುದ್ದೇಬಿಹಾಳ: ಪಟ್ಟಣದ ವೀರ ಮಹೇಶ್ವರಿ ತರುಣ ಸಂಘ ಹಾಗೂ  ಜಂಗಮ ಸಮಾಜದ ಸಹಯೋಗದಲ್ಲಿ ಜಗದ್ಗುರು ರೇಣುಕಾಚಾರ್ಯ ಭಗವತ್ಪಾದರ ಜಯಂತ್ಯುತ್ಸವ ನಿಮಿತ್ತ ಪಟ್ಟಣದಲ್ಲಿ ಅವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ನಡೆಯಿತು. ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ವೀರಭದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ವಿಜಯ ಮಾಹಾಂತೇಶ ಮಂಗಲ ಕಾರ್ಯಾಲಯಕ್ಕೆ ಬಂದು ಸಮಾರೋಪಗೊಂಡಿತು.ವಿಜಯ ಮಹಾಂತೇಶ ಮಂಗಲ ಕಾರ್ಯಾಲಯದಲ್ಲಿ ನಡೆದ ಧರ್ಮ ಸಭೆಯನ್ನುದ್ದೇಶಿಸಿ ರುದ್ರಮುನಿ ಶಿವಾಚಾರ್ಯರು, ಆಲಮಟ್ಟಿಯ ರುದ್ರಮುನಿ ದೇವರು, ಕುಂಟೋಜಿಯ ಚನ್ನವೀರ ದೇವರು ಮಾತನಾಡಿದರು. ಸುಗೂರೇಶ್ವರ ದೇವರು ಉಪನ್ಯಾಸ ನೀಡಿದರು.
ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಗೌರಿಶಂಕರ ಪುರಾಣಿಕಮಠ, ಸಿಂದಗಿ ತಾಲೂಕು ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ, ಘನಮಠೇಶ್ವರ ಶ್ರೀ, ನಿಜಲಿಂಗಯ್ಯ ಶಿವಯೋಗಿವುಠ, ಮಲ್ಲಯ್ಯ ಸಾಲಿಮಠ, ಸುರೇಶ ಶೇಖರಯ್ಯ ಹಿರೇಮಠ, ಶಿವಪತ್ರಯ್ಯ ಸ್ಥಾವರಮಠ, ಪುರಸಭೆ ಸದಸ್ಯ ಶರಣು ಬೂದಿಹಾಳಮಠ, ಸದಾಶಿವ ಮಠ, ಸಿಧ್ಧಲಿಂಗಯ್ಯ ಕಲ್ಯಾಣಮಠ, ಮಹಿಳೆಯರು ಉಪಸ್ಥಿತರಿದ್ದರು. ವಾಗೇಶ ಹಿರೇಮಠ ನಿರೂಪಿಸಿದರು. ಆನಂದ ಹಿರೇಮಠ ಸ್ವಾಗತಿಸಿದರು. ವೀರೇಶ ಹೀರೆಮಠ ವಂದಿಸಿದರು.

ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಮತ ಚಲಾಯಿಸಿ
ಬಸವನಬಾಗೇವಾಡಿ: ಮತದಾನ ಪ್ರತಿಯೊಬ್ಬರ ಹಕ್ಕು. ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಆಮೂಲ್ಯವಾದ ಮತ ಚಲಾಯಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಹೇಳಿದರು. ತಾಲೂಕಿನ ಯರನಾಳ ಗ್ರಾಮದಲ್ಲಿ ಶನಿವಾರ ಮತದಾನ ಜಾಗೃತಿ ಕಾರ್ಯಕ್ರಮದ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಜ್ಞಾವಿಧಿ ಬೋಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡುವುದಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಏ.17ರಂದು ನಡೆಯುವ ಚುನಾವಣೆಯಲ್ಲಿ ತಮ್ಮ ಪೋಷಕರನ್ನು ಮತದಾನ ಮಾಡುವಂತೆ ಪ್ರೇರೇಪಿಸುತ್ತೇವೆ ಎಂದು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು. ನಂತರ ಯರನಾಳ ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಮದ ಪ್ರಮುಖರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು  ಪ್ರಭಾತ ಪೇರಿ ಮಾಡಿದರು.
ಮತದಾನ ಮಾಡುವುದರ ಕುರಿತು ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸಲಾಯಿತು.

ಅಕಾಲಿಕ ಮಳೆಗೆ ಹಾನಿ: ಪರಿಹಾರ ಧನದ ಚೆಕ್ ವಿತರಣೆ
ಚಡಚಣ: ಸಮೀಪದ ಹತ್ತಳ್ಳಿ ಗ್ರಾಮದಲ್ಲಿ ಮಾ.10ರಂದು ಬೀಸಿದ ಭಾರೀ ಬಿರುಗಾಳಿಗೆ ಮನೆಗಳ ಮೇಲ್ಛಾವಣಿಯ ಪತ್ರಾಸ್ ಹಾರಿ ಹೋದ ಸಂತ್ರಸ್ತ ಕುಟುಂಬಗಳಿಗೆ ಇಂಡಿ ಉಪವಿಭಾಗಾಧಿಕಾರಿ ಕೃಷ್ಣೇಗೌಡ ತಾಯಣ್ಣವರ ಅವರು ಚಡಚಣ ವಿಶೇಷ ತಹಸೀಲ್ದಾರ ಕಾರ್ಯಾಲಯದಲ್ಲಿ ಶನಿವಾರ ಪರಿಹಾರ ಧನದ ಚೆಕ್ ವಿತರಿಸಿದರು. ನಂತರ ಮಾತನಾಡಿದ ಅವರು, ಕಂದಾಯ ಅಧಿಕಾರಿ ವರ್ಗದ ಸಮೀಕ್ಷೆ ಪ್ರಕಾರ ಮಾ.10ರಂದು ಬೀಸಿದ ಭಾರಿ ಬಿರುಗಾಳಿಗೆ ಹತ್ತಳ್ಳಿ ಗ್ರಾಮದಲ್ಲಿ 223 ಮನೆಗಳು ಹಾಗೂ 17 ಗುಡಿಲಸುಗಳು ಭಾಗಶಃ ಬಿದ್ದಿದ್ದು, ಹೊಳೆಸಂಖ ಗ್ರಾಮದಲ್ಲಿ 124 ತೋಟದ ಮನೆ ಹಾಗೂ ಹತ್ತಳ್ಳಿ ಗ್ರಾಮದಲ್ಲಿ 81 ತೋಟದ ಮನೆಗಳು ಸಂಪೂರ್ಣವಾಗಿ ಬಿದ್ದಿದ್ದು, ಒಟ್ಟಾರೆ 428 ಮನೆಗಳು ಪರಿಹಾರಕ್ಕೆ ಅರ್ಹವೆಂದು ಕಂಡು ಬಂದಿದೆ. ಭಾಗಶಃ ಬಿದ್ದ ಮನೆಗಳಿಗೆ ರಾಜ್ಯ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರು. 2300 ಹಾಗೂ ಸಂಪರ್ಣವಾಗಿ ಬಿದ್ದ ಮನೆಗಳಿಗೆ ರು. 3000 ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇಂಡಿ ತಹಸೀಲ್ದಾರ್ ತುಕಾರಾಮ ಕಲ್ಯಾಣಕರ, ಚಡಚಣ ವಿಶೇಷ ತಹಸೀಲ್ದಾರ್ ಆರ್.ಎಮ್. ತುರಕನಗೇರಿ, ಹತ್ತಳ್ಳಿ ಗ್ರಾಮದ ಮುಖಂಡರಾದ ಬಸವರಾಜ ಬಿರಾದಾರ, ಚಂದ್ರಶೇಖರ ಹಡಲಸಂಗ, ಸಿದ್ಧಾರಾಮ ಬಿರಾದಾರ, ಭೀಮಶಿ ಪೂಜಾರಿ, ಮಲ್ಲಿಕಾರ್ಜುನ ಯರನಾಳ, ಕುಶಾಲ ನದಾಫ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮತದಾನ ಜಾಗೃತಿ ಮೂಡಿಸಲು ಪ್ರತಿಜ್ಞೆ
ಬಿಜಾಪುರ: ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಹೆಚ್ಚು ಜನರು ಮತದಾನದಲ್ಲಿ ಪಾಲ್ಗೊಳ್ಳುವುದು ಅವಶ್ಯವಿದ್ದು, ಮತದಾನ ಮಾಡುವುದಲ್ಲದೇ ಗ್ರಾಮದ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸುವುದಾಗಿ ಕನ್ನಾಳ ತಾಂಡಾದ ವಿದ್ಯಾರ್ಥಿ ಸಮುದಾಯ ಶನಿವಾರ ವಾಗ್ದಾನ ಮಾಡಿತು. ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ನೆಹರು ಯುವ ಕೇಂದ್ರ, ವಾರ್ತಾ ಇಲಾಖೆ, ಜೈ ಹನುಮಾನ ಪ್ರೌಢಶಾಲೆ ಇವುಗಳ ಆಶ್ರಯದಲ್ಲಿ ಸ್ಥಳೀಯ ಯುವ ಸಂಘಟನೆಗಳ ಸಹಕಾರದೊಂದಿಗೆ ಕನ್ನಾಳ ತಾಂಡಾದಲ್ಲಿ ಹಮ್ಮಿಕೊಂಡ ಮತದಾರರ ಜಾಗೃತಿ ಕಾರ್ಯಕ್ರಮದ ನಿಮಿತ್ತ ಗ್ರಾಮದಲ್ಲಿ ಜಾಥಾ ಹಮ್ಮಿಕೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.  ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಡಿ. ದಯಾನಂದ, ಪ್ರೌಢಶಾಲೆಯ ಮುಖ್ಯಗುರು ಬಿ.ಎಸ್.ಪಾಟೀಲ, ಶಿಕ್ಷಕರಾದ ಎಂ.ಬಿ.ಪಾಟೀಲ, ಎಸ್.ಜಿ.ಕುಲಕರ್ಣಿ, ಎಸ್.ಐ.ವಸ್ತ್ರದ ಇದ್ದರು.

ನೀರು ಸರಬರಾಜಿನ ಪೈಪ್ ಸೋರಿಕೆ: ರಸ್ತೆ ಹಾಳು
ಬಸವನಬಾಗೇವಾಡಿ: ಪಟ್ಟಣಕ್ಕೆ ತಾಲೂಕಿನ ಆಲಮಟ್ಟಿಯಿಂದ ಪೂರೈಕೆಯಾಗುವ ಕುಡಿವ ನೀರು ಸರಬರಾಜಿನ ಪೈಪ್‌ಗಳು ಸೋರುತ್ತಿರುವುದರಿಂದ ಆಲಮಟ್ಟಿಯ ರೈಲ್ವೆಯ ಸುರಂಗಮಾರ್ಗದ ಮೇಲ್ಭಾಗದ ರಸ್ತೆ ಡಾಂಬರು ಕಿತ್ತುಹೋಗಿ ತೆಗ್ಗು ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಮುಂದಿನ ದಿನಗಳಲ್ಲಿ ಸೇತುವೆಗೂ ಹಾನಿಯಾಗುವ ಸಂಭವವಿದ್ದು, ಸೇತುವೆ ಮೇಲ್ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹಾಗೂ ಕೆಳಭಾಗದಲ್ಲಿ ಹಾದು ಹೋಗುವ ರೈಲ್ವೆಯ ಮೇಲೆ ಸೇತುವೆ ಕುಸಿಯುವ ಆತಂಕವಿದೆ. ಕೂಡಲೇ ಅಧಿಕಾರಿಗಳು ದುರಸ್ತಿಗೊಳಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಕೂಡಲೇ ಪೈಪ್‌ಗಳನ್ನು ದುರಸ್ತಿಗೊಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗಿರೀಶ ಮರೋಳ, ಗೋಪಾಲ ಬಂಡಿವಡ್ಡರ, ರಮೇಶ ರೇಶ್ಮಿ, ಕರವೀರ ಮಡಿವಾಳರ, ಸಂಗಪ್ಪ ಸೊನ್ನದ ಹಾಗೂ ಕೃಷ್ಣಾ ತೀರ ಮುಳುಗಡೆ ಕ್ಷೇಮಾಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮತದಾನ ಪ್ರತಿಯೊಬ್ಬರ ಹಕ್ಕು: ನೀರಲಕೇರಿ
ಇಂಡಿ: ಮತದಾನ ಪ್ರತಿಯೊಬ್ಬರ ಹಕ್ಕು. 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಬೇಕು ಎಂದು ಬಿಇಒ ದೊಡ್ಡಬಸಪ್ಪ ನೀರಲಕೇರಿ ಹೇಳಿದರು. ಪಟ್ಟಣದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜಾಗೃತಿ ಜಾಥಾ ಆದರ್ಶ ವಿದ್ಯಾಲಯದಿಂದ ಪ್ರಾರಂಭಗೊಂಡು ಸಂಗೋಳ್ಳಿ ರಾಯಣ್ಣ, ಬಸವೇಶ್ವರ, ಅಂಬೇಡ್ಕರ್, ತಹಸೀಲ್ದಾರ್  ಕಚೇರಿ ಮುಂಭಾಗದಿಂದ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಾಗೃತಿ ಮೂಡಿಸಿತು. ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ರವೀಂದ್ರ ಬೆಣ್ಣೂರ, ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ.ಪಿ. ಬಿರಾದಾರ, ಶಿಕ್ಷಣ ಸಂಯೋಜಕ ಜೆ.ಎಂ.ಕರಜಗಿ, ಶಿಕ್ಷಕಿ ಪ್ರಭಾವತಿ ಐಗಳಿ ಇದ್ದರು.

ಪ್ರಕಾಶ ರಾಠೋಡ ಗೆಲವಿಗೆ ಶ್ರಮ: ಅರ್ಜುನ ರಾಠೋಡ
ಬಿಜಾಪುರ: ಕಾಂಗ್ರೆಸ್ ಆಕಾಂಕ್ಷಿಗಳು ಒಂದಾಗಿದ್ದು, ಯಾವುದೇ ಭಿನ್ನಾಭಿಪ್ರಾಯವಿಲ್ಲ. ಬಂಜಾರಾ ಸಮಾಜಕ್ಕೆ ಸಿಕ್ಕಿರುವ ಅವಕಾಶವನ್ನು ನಾವೆಲ್ಲರೂ ಪಡೆದುಕೊಂಡು ನಮ್ಮ ಪಕ್ಷದ 7 ಜನ ಶಾಸಕರು ಹಾಗೂ ಜಿಲ್ಲಾ ಅಧ್ಯಕ್ಷರು ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಪ್ರಕಾಶ ರಾಠೋಡ ಅವರ ಗೆಲವು ಖಚಿತ ಎಂದು ಜಿಪಂ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ ಹೇಳಿದರು.  ಶನಿವಾರ ನಗರದ ಆಲಮ್‌ಗಿರಿ ಸಭಾವನದಲ್ಲಿ ಬಿಜಾಪುರ ಜಿಲ್ಲಾ ಬಂಜಾರಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಸದಸ್ಯ ಕಾಂತಾ ನಾಯಕ, ಮಾಜಿ ಶಾಸಕ ಮನೋಹರ ಐನಾಪುರ, ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ರಾಠೋಡ ಮಾತನಾಡಿದರು. ಸಮಾಜದ ಧರ್ಮಗುರುಗಳಾದ ಧನಸಿಂಗ್ ಮಹಾರಾಜ, ಪ್ರಕಾಶ ಮಹಾರಾಜ್, ಗೋಪಾಲ ಮಹಾರಾಜ್, ಡಿ.ಎಲ್.ಚವ್ಹಾಣ, ಅನೀಲ ರಾಠೋಡ ಉಪಸ್ಥಿತರಿದ್ದರು.
ಚಂದು ಜಾಧವ ಸ್ವಾಗತಿಸಿದರು. ಭರತ ನಾಯಕ ವಂದಿಸಿದರು.

ಮತದಾನ ಜಾಗೃತಿ ಜಾಥಾ...
ದೇವರಹಿಪ್ಪರಗಿಯ ರಾಷ್ಟ್ರೀಯ ಹೆದ್ದಾರಿ ಮೇಲಿನ ಮೊಹರೆ ಹನುಮಂತರಾಯ ವೃತ್ತದಲ್ಲಿ ವಿವಿಧ ಶಾಲಾ ಮಕ್ಕಳಿಂದ ಮಾನವ ಸರಪಳಿ ನಿರ್ಮಿಸಿ ಮತದಾನ ಜಾಗೃತಿ ಜಾಥಾ ನಡಯಿತು.

ಸಂಪತ್ತು ನಿರ್ವಹಣೆ ಕುರಿತು  ಇಂದು ಕಾರ್ಯಾಗಾರ
ಮುದ್ದೇಬಿಹಾಳ: ಆನಂದ ರಾಠಿ ಸಂಸ್ಥೆಯ ವತಿಯಿಂದ ನಗರದ ರಾಘವೇಂದ್ರ ಮಂಗಲ ಭವನದಲ್ಲಿ ಮಾ. 23 ರಂದು ಮಧ್ಯಾಹ್ನ 4.30 ಗಂಟೆಗೆ ಸಂಪತ್ತು ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಹೂಡಿಕೆದಾರರಿಗೆ ಅನುಕೂಲ ಆಗುವಂತೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಂಗಳೂರು ಶಾಖೆಯ ವ್ಯವಸ್ಥಾಪಕ ಗಿರಿಧರ ಸಂದೀಪ್ ಪ್ರಸಕ್ತ ಹಣಕಾಸಿನ ಮಾರುಕಟ್ಟೆಯಲ್ಲಿ ಹೂಡಿಕೆ ಅವಕಾಶಗಳು, ಮುಂಬಯಿಯ ಸಿಡಿಎಲ್ ವ್ಯವಸ್ಥಾಪಕ ಸಿದ್ದಾರ್ಥ ಬಜಾಜ್ ಷೇರು ಮಾರುಕಟ್ಟೆ ಕುರಿತು ಉಪನ್ಯಾಸ ನಿಡಲಿದ್ದಾರೆ. ಸ್ಥಳಿಯ ಎಸ್‌ಬಿಐ ಶಾಖೆಯ ವ್ಯವಸ್ಥಾಪಕ ಬಿ.ಪಾರ್ಥಸಾರಥಿ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com